×
Ad

ಮತ್ತೊಮ್ಮೆ 10 ಸಾವಿರ ರನ್ ಮೈಲುಗಲ್ಲು ತಪ್ಪಿಸಿಕೊಂಡ ಕುಕ್

Update: 2016-05-27 23:14 IST

ಲಂಡನ್, ಮೇ 27: ಇಂಗ್ಲೆಂಡ್ ತಂಡದ ನಾಯಕ ಅಲೆಸ್ಟೈರ್ ಕುಕ್‌ಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿ ಭಾರತದ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿಯಲು ಇನ್ನೂ ಕೆಲವು ದಿನ ಕಾಯಬೇಕಾಗಿದೆ.

 ಶುಕ್ರವಾರ ಇಲ್ಲಿ ಆರಂಭವಾದ ಶ್ರೀಲಂಕಾ ವಿರುದ್ಧದ ಎರಡನೆ ಟೆಸ್ಟ್‌ನಲ್ಲಿ ಕುಕ್ ಹೊಸ ಮೈಲುಗಲ್ಲು ತಲುಪುವ ವಿಶ್ವಾಸದಲ್ಲಿದ್ದರು. ಕುಕ್ ಇನ್ನೂ 20 ರನ್ ಗಳಿಸುತ್ತಿದ್ದರೆ 10,000 ಟೆಸ್ಟ್ ರನ್ ಗಳಿಸಿದ ಇಂಗ್ಲೆಂಡ್‌ನ ಮೊದಲ ಹಾಗೂ ವಿಶ್ವದ 12ನೆ ಆಟಗಾರನೆಂಬ ಕೀರ್ತಿಗೆ ಭಾಜನರಾಗಬಹುದಿತ್ತು.

ಆದರೆ, ಕುಕ್ 15 ರನ್ ಗಳಿಸುತ್ತಲ್ಲೇ ಲಂಕೆಯ ವೇಗಿ ಸುರಂಗ ಲಕ್ಮಲ್ ಎಸೆತವನ್ನು ಕೆಣಕಲು ಹೋಗಿ ಸ್ಲಿಪ್‌ನಲ್ಲಿದ್ದ ಡಿ. ಕರುಣರತ್ನೆಗೆ ಕ್ಯಾಚ್ ನೀಡಿದರು. ಈ ಮೂಲಕ ಕೇವಲ 5 ರನ್‌ನಿಂದ ತೆಂಡುಲ್ಕರ್ ದಾಖಲೆ ಮುರಿಯುವುದರಿಂದ ವಂಚಿತರಾದರು. ಕುಕ್ ಔಟಾದಾಗ ಇಂಗ್ಲೆಂಡ್ 14ನೆ ಓವರ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿದ್ದರು.

 ಇಂಗ್ಲೆಂಡ್ ಈ ಪಂದ್ಯದಲ್ಲಿ ಎರಡನೆ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದರೆ ಕುಕ್‌ಗೆ ಹೊಸ ಮೈಲುಗಲ್ಲು ತಲುಪುವ ಸಾಧ್ಯತೆಯಿದೆ. ಒಂದು ವೇಳೆ ಇಂಗ್ಲೆಂಡ್‌ಗೆ 2ನೆ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಗದೇ ಇದ್ದರೆ, ಕುಕ್ ‘ಕ್ರಿಕೆಟ್‌ನ ಕಾಶಿ’ ಲಾರ್ಡ್ಸ್‌ನಲ್ಲಿ ಜೂ.9 ರಿಂದ ಆರಂಭವಾಗಲಿರುವ ಮೂರನೆ ಟೆಸ್ಟ್‌ನಲ್ಲಿ 10 ಸಾವಿರ ರನ್ ಮೈಲುಗಲ್ಲು ತಲುಪಬಹುದು.

 ಕಳೆದ ವಾರ ಹೆಡ್ಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಮಾತ್ರ ಬ್ಯಾಟಿಂಗ್ ಮಾಡಿತ್ತು. ಆ ಪಂದ್ಯವನ್ನು ಇಂಗ್ಲೆಂಡ್ ಇನಿಂಗ್ಸ್ ಹಾಗೂ 88 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News