ಸ್ಕ್ವಾಷ್ ಫೈನಲ್:ಜೋಶ್ನಾಗೆ ವೀರೋಚಿತ ಸೋಲು
Update: 2016-05-28 23:51 IST
ಹಾಂಕಾಂಗ್, ಮೇ 28: ಭಾರತದ ಅಗ್ರ ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಹಾಂಕಾಂಗ್ ಇಂಟರ್‌ನ್ಯಾಶನಲ್ ಸ್ಕ್ವಾಷ್ ಟೂರ್ನಮೆಂಟ್‌ನ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ್ದಾರೆ.
ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಜೋಶ್ನಾ ನ್ಯೂಝಿಲೆಂಡ್‌ನ ಅಗ್ರ ಶ್ರೇಯಾಂಕದ ಆಟಗಾರ್ತಿ ಜೊಯೆಲ್ ಕಿಂಗ್ ವಿರುದ್ಧ ತೀವ್ರ ಪೈಪೋಟಿ ನೀಡಿದರೂ ಅಂತಿಮವಾಗಿ 11-9, 11-9, 9-11, 11-9 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಜೋಶ್ನಾ ವಿಶ್ವದ ನಂ.9ನೆ ಆಟಗಾರ್ತಿ ಜೋಯೆಲ್ ಕಿಂಗ್ ವಿರುದ್ಧ ಈ ವರೆಗೆ ಆಡಿರುವ 8 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಜಯ ಸಾಧಿಸಿದ್ದಾರೆ.