ದ್ವಿತೀಯ ಟೆಸ್ಟ್: ಸಂಕಷ್ಟದಲ್ಲಿ ಶ್ರೀಲಂಕಾ

Update: 2016-05-28 18:23 GMT

ಮೊಯಿನ್ ಅಲಿ ಅಜೇಯ ಶತಕ

ಚೆಸ್ಟರ್ ಲೀ ಸ್ಟ್ರೀಟ್, ಮೇ 28: ಮೊಯಿನ್ ಅಲಿ ಭರ್ಜರಿ ಶತಕ(155)ದ ನೆರವಿನಿಂದ ಇಂಗ್ಲೆಂಡ್ ತಂಡ ಶ್ರೀಲಂಕಾದ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೆ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 498 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

2ನೆ ದಿನವಾದ ಶನಿವಾರ ಮೊದಲ ಇನಿಂಗ್ಸ್ ಆರಂಭಿಸಿರುವ ಶ್ರೀಲಂಕಾ 40 ಓವರ್‌ಗಳಲ್ಲಿ 91 ರನ್‌ಗೆ 8 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಸತತ ಎರಡನೆ ಪಂದ್ಯದಲ್ಲೂ ಫಾಲೋ-ಆನ್‌ಗೆ ಸಿಲುಕುವ ಭೀತಿಯಲ್ಲಿದೆ. ಬ್ರಾಡ್, ವೋಕ್ಸ್ ಹಾಗೂ ಆ್ಯಂಡರ್ಸನ್ ದಾಳಿಗೆ ಸಿಲುಕಿರುವ ಶ್ರೀಲಂಕಾದ ಪರವಾಗಿ ಮೆಂಡಿಸ್(35) ಅಗ್ರ ಸ್ಕೋರರ್ ಎನಿಸಿಕೊಂಡರು.

 6 ವಿಕೆಟ್ ನಷ್ಟಕ್ಕೆ 310 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ತಂಡ ಆಲ್‌ರೌಂಡರ್ ಅಲಿ(ಔಟಾಗದೆ, 155 ರನ್, 207 ಎಸೆತ, 17 ಬೌಂಡರಿ, 2 ಸಿಕ್ಸರ್) ಫಿನ್(10) ಅವರೊಂದಿಗೆ 9ನೆ ವಿಕೆಟ್‌ಗೆ 72 ರನ್ ಸೇರಿಸಿ ತಂಡದ ಸ್ಕೋರನ್ನು 500ರ ಗಡಿ ತಲುಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News