×
Ad

ಫ್ರೆಂಚ್ ಓಪನ್: ಸಾನಿಯಾ-ಹಿಂಗಿಸ್ ಸವಾಲು ಅಂತ್ಯ

Update: 2016-05-30 23:47 IST

ಪ್ಯಾರಿಸ್, ಮೇ 30: ಎಲ್ಲ ನಾಲ್ಕು ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲಬೇಕೆಂಬ ಮಾರ್ಟಿನಾ ಹಿಂಗಿಸ್ ಹಾಗೂ ಸಾನಿಯಾ ಮಿರ್ಝಾ ಕನಸು ಭಗ್ನವಾಗಿದೆ.

ರವಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಮೂರನೆ ಸುತ್ತಿನ ಪಂದ್ಯದಲ್ಲಿ ಸಾನಿಯಾ ಹಾಗೂ ಹಿಂಗಿಸ್ ಜೋಡಿ ಝೆಕ್‌ನ ಬಾರ್ಬೊರ ಕ್ರೆಜ್‌ಸಿಕೊವಾ ಹಾಗೂ ಕಟೆರಿನಾ ಸಿನಿಯಾಕೊವಾ ವಿರುದ್ಧ 6-3,,6-2 ಸೆಟ್‌ಗಳ ಅಂತರದಿಂದ ಸೋತರು.

ಕಳೆದ ವರ್ಷ ವಿಂಬಲ್ಡನ್ ಹಾಗೂ ಯುಎಸ್ ಓಪನ್, ಈ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದ ಸಾನಿಯಾ-ಹಿಂಗಿಸ್ ಫ್ರೆಂಚ್ ಓಪನ್‌ನ್ನು ಜಯಿಸಿ ಸತತ ನಾಲ್ಕನೆ ಪ್ರಮುಖ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದರು.

ಆದರೆ, ಝೆಕ್ ಗಣರಾಜ್ಯದ ಆಟಗಾರ್ತಿಯರ ವಿರುದ್ಧ ನೇರ ಸೆಟ್‌ಗಳ ಅಂತರದಿಂದ ಸೋತಿರುವ ಸಾನಿಯಾ-ಹಿಂಗಿಸ್ ನಿರಾಸೆ ಮೂಡಿಸಿದರು.

ಇದೇ ವೇಳೆ ವಿಲಿಯಮ್ಸ್ ಸಹೋದರಿಯರಾದ ವೀನಸ್ ಹಾಗೂ ಸೆರೆನಾ ಡಚ್-ಸ್ವೀಡನ್ ಜೋಡಿ ಕಿಕಿ ಬೆರ್ಟೆನ್ಸ್ ಹಾಗೂ ಜೊಹನ್ನಾ ಲಾರ್ಸನ್ ವಿರುದ್ಧ 6-3, 6-3 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಡಬಲ್ಸ್ ಪಂದ್ಯದಲ್ಲಿ ಮಹತ್ವದ ಸಾಧನೆ ಮಾಡಿರುವ ಈ ಜೋಡಿ 2010ರಲ್ಲಿ ಎಲ್ಲ ನಾಲ್ಕೂ ಗ್ರಾನ್‌ಸ್ಲಾಮ್‌ನ್ನು ಜಯಿಸಿತ್ತು.

ಮರ್ರೆ ಆರನೆ ಬಾರಿ ಕ್ವಾರ್ಟರ್‌ಫೈನಲ್‌ಗೆ

ಪ್ಯಾರಿಸ್, ಮೇ 30: ಅಮೆರಿಕದ ಜಾನ್ ಇಸ್ನೆರ್‌ರನ್ನು ಮಣಿಸಿದ ಬ್ರಿಟನ್ ಆ್ಯಂಡಿ ಮರ್ರೆ ಆರನೆ ಬಾರಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದರು.

ರವಿವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ 2ನೆ ಶ್ರೇಯಾಂಕದ ಮರ್ರೆ ಅವರು ಇಸ್ನೆರ್‌ರನ್ನು 7-6(9), 6-4, 6-3 ಸೆಟ್‌ಗಳ ಅಂತರದಿಂದ ಮಣಿಸಿದರು. ಮೂರು ಬಾರಿ ಫ್ರೆಂಚ್ ಓಪನ್‌ನಲ್ಲಿ ರನ್ನರ್-ಅಪ್ ಪ್ರಶಸ್ತಿ ಜಯಿಸಿರುವ ಮರ್ರೆ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ರಿಚರ್ಡ್ ಗಾಸ್ಕಟ್ ಅಥವಾ ಜಪಾನ್‌ನ ಕೀ ನಿಶಿಕೊರಿ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News