×
Ad

ಐಪಿಎಲ್-9 ಹೈಲೈಟ್ಸ್

Update: 2016-05-30 23:51 IST

973: ವಿರಾಟ್ ಕೊಹ್ಲಿ ಈ ವರ್ಷದ ಐಪಿಎಲ್‌ನಲ್ಲಿ ಒಟ್ಟು 973 ರನ್ ಗಳಿಸಿದ್ದಾರೆ. ಇದು ಐಪಿಎಲ್‌ನಲ್ಲಿ ಮಾತ್ರವಲ್ಲ, ಟ್ವೆಂಟಿ-20 ಟೂರ್ನಿಯ ಇತಿಹಾಸದಲ್ಲಿ ಬ್ಯಾಟ್ಸ್‌ಮನ್ ವೋರ್ವ ಗಳಿಸಿದ್ದ ಗರಿಷ್ಠ ವೈಯಕ್ತಿಕ ಸ್ಕೋರ್. ಕೊಹ್ಲಿ ಹಾಗೂ ಡೇವಿಡ್‌ವಾರ್ನರ್(848ರನ್) ಈ ಹಿಂದಿನ ಆವೃತ್ತಿಯಲ್ಲಿ ಒಟ್ಟು 733 ರನ್ ಗಳಿಸಿದ್ದ ಕ್ರಿಸ್ ಗೇಲ್(ಐಪಿಎಲ್ 2012) ಹಾಗೂ ಮೈಕಲ್ ಹಸ್ಸಿ(ಐಪಿಎಲ್ 2013) ದಾಖಲೆಯನ್ನು ಮುರಿದಿದ್ದಾರೆ.

468: ಈ ವರ್ಷದ ಐಪಿಎಲ್‌ನಲ್ಲಿ ರನ್ ಚೇಸಿಂಗ್ ವೇಳೆ ವಾರ್ನರ್ 468 ರನ್ ಗಳಿಸಿದರು. ಇದು ಐಪಿಎಲ್ ಟೂರ್ನಿಯಲ್ಲಿ ಬ್ಯಾಟ್ಸ್‌ಮನ್‌ವೋರ್ವನ ಉತ್ತಮ ಸಾಧನೆ. ರಾಬಿನ್ ಉತ್ತಪ್ಪ 2014ರಲ್ಲಿ 457 ರನ್ ಗಳಿಸಿದ್ದರು.

 687: ಎಬಿಡಿವಿಲಿಯರ್ಸ್ ಇನಿಂಗ್ಸ್ ಆರಂಭಿಸದೇ ಒಂದೇ ಐಪಿಎಲ್ ಋತುವಿನಲ್ಲಿ ಗರಿಷ್ಠ ಸ್ಕೋರ್(687) ಗಳಿಸಿದ ಸಾಧನೆ ಮಾಡಿದರು. ವಿಲಿಯರ್ಸ್ ಈವರ್ಷ 3ನೆ ೆಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 683 ರನ್ ಗಳಿಸಿದ್ದರು.

1: ಈ ವರ್ಷದ ಐಪಿಎಲ್‌ನಲ್ಲಿ ಅಗ್ರ-10 ಬೌಲರ್‌ಗಳ ಪಟ್ಟಿಯಲ್ಲಿ ಏಕೈಕ ಸ್ಪಿನ್ನರ್ ಸ್ಥಾನ ಪಡೆದಿದ್ದಾರೆ. ಆರ್‌ಸಿಬಿಯ ಲೆಗ್ ಸ್ಪಿನ್ನರ್ ಯುಝ್ವೇಂದ್ರ ಚಾಹಲ್ ಐಪಿಎಲ್ 2016ರಲ್ಲಿ 21 ವಿಕೆಟ್ ಪಡೆದು ಎರಡನೆ ಗರಿಷ್ಠ ಸಂಖ್ಯೆಯ ವಿಕೆಟ್ ಪಡೆದಿದ್ದಾರೆ. ಚಾಹಲ್ ಆರ್‌ಸಿಬಿ ಪರ ಸತತ ಎರಡನೆ ವರ್ಷವೂ ಗರಿಷ್ಠ ವಿಕೆಟ್ ಪಡೆದಿದ್ದಾರೆ. 2015ರಲ್ಲಿ 23 ವಿಕೆಟ್ ಪಡೆದಿದ್ದರು.

13: ಗರಿಷ್ಠ ವಿಕೆಟ್ ಪಡೆದಿರುವುದಕ್ಕೆ ಆರೆಂಜ್ ಕ್ಯಾಪ್ ಧರಿಸಿರುವ ಭುವನೇಶ್ವರ ಕುಮಾರ್ ಓವರ್‌ನ ಅಂತ್ಯದಲ್ಲಿ(16 ರಿಂದ 20) 13 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೂರ್ನಿಯ ಪವರ್‌ಪ್ಲೇ ವೇಳೆ 10 ವಿಕೆಟ್ ಪಡೆದಿರುವ ಭುವನೇಶ್ವರ್ ಟೂರ್ನಿಯಲ್ಲಿ ಒಟ್ಟು 23 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

 14: ಧವಳ್ ಕುಲಕರ್ಣಿ ಈ ವರ್ಷದ ಐಪಿಎಲ್‌ನ ಪವರ್‌ಪ್ಲೇ ವೇಳೆ ಗರಿಷ್ಠ ವಿಕೆಟ್(14) ಪಡೆದಿರುವ ಮೊದಲ ಬೌಲರ್. ಈ ತನಕದ ಐಪಿಎಲ್‌ನಲ್ಲಿ ಕೇವಲ ಇಬ್ಬರು ಬೌಲರ್‌ಗಳು ಪವರ್‌ಪ್ಲೇನಲ್ಲಿ ಗರಿಷ್ಠ ವಿಕೆಟ್ ಪಡೆದಿದ್ದಾರೆ. ಮಿಚೆಲ್ ಜಾನ್ಸನ್(16) ಹಾಗೂ ಮೋಹಿತ್ ಶರ್ಮ(15) ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News