ಶಂಕಾಸ್ಪದ ಬೌಲಿಂಗ್ ಸುಳಿಯಲ್ಲಿ ಶಮಿಂದಾ ಎರಂಗ

Update: 2016-05-31 18:18 GMT

ಲಂಡನ್, ಮೇ 31: ಡುಹ್ರಾಮ್‌ನಲ್ಲಿ ಸೋಮವಾರ ಕೊನೆಗೊಂಡ ಇಂಗ್ಲೆಂಡ್ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದ ವೇಳೆ ಶ್ರೀಲಂಕಾದ ವೇಗದ ಬೌಲರ್ ಶಮಿಂದಾ ಎರಂಗ ಶಂಕಾಸ್ಪದ ಬೌಲಿಂಗ್ ಆರೋಪಕ್ಕೆ ಗುರಿಯಾಗಿದ್ದಾರೆ ಎಂದು ಐಸಿಸಿ ಮಂಗಳವಾರ ತಿಳಿಸಿದೆ.

ಅಂಪೈರ್‌ಗಳು ಶ್ರೀಲಂಕಾದ ಟೀಮ್ ಮ್ಯಾನೇಜ್‌ಮೆಂಟ್‌ಗೆ ಹಸ್ತಾಂತರಿಸಿರುವ ವರದಿಯಲ್ಲಿ 29ರಹರೆಯದ ಬೌಲರ್‌ನ ಬೌಲಿಂಗ್ ಶೈಲಿಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಎರಂಗ ಇನ್ನು 14 ದಿನಗಳೊಳಗೆ ಬೌಲಿಂಗ್ ಶೈಲಿಯ ಪರೀಕ್ಷೆಗೆ ಒಳಗಾಗಬೇಕು. ಬೌಲಿಂಗ್ ಪರೀಕ್ಷೆಯ ಫಲಿತಾಂಶ ಬರುವ ತನಕ ಅವರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲಿಂಗ್ ನಡೆಸಬಹುದು ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಶ್ರೀಲಂಕಾದ ಪರ ಈ ತನಕ 18 ಟೆಸ್ಟ್ ಪಂದ್ಯಗಳನ್ನು ಆಡಿರುವ ಎರಂಗ ಒಟ್ಟು 53 ವಿಕೆಟ್‌ಗಳನ್ನು ಪಡೆದಿದ್ದಾರೆ. ಸೋಮವಾರ ಕೊನೆಗೊಂಡ ಇಂಗ್ಲೆಂಡ್ ವಿರುದ್ಧದ ಎರಡನೆ ಟೆಸ್ಟ್‌ನಲ್ಲಿ ಒಂದೂ ವಿಕೆಟ್ ಪಡೆದಿಲ್ಲ. ಆ ಪಂದ್ಯವನ್ನು ಇಂಗ್ಲೆಂಡ್ 9 ವಿಕೆಟ್‌ಗಳಿಂದ ಗೆದ್ದುಕೊಂಡು 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News