ಭಾರತದ ಕ್ರಿಕೆಟಿಗರಿಗೆ ಕೌಂಟಿ ಆಡಲು ಅವಕಾಶ ನೀಡಬೇಕು:ಗಂಗುಲಿ

Update: 2016-05-31 18:23 GMT

  ಹೊಸದಿಲ್ಲಿ, ಮೇ 31: ರೋಹಿತ್ ಶರ್ಮ, ಶಿಖರ್ ಧವನ್, ಆರ್.ಅಶ್ವಿನ್, ಉಮೇಶ್ ಯಾದವ್ ಹಾಗೂ ವರುಣ್ ಆ್ಯರೊನ್ ಅವರಂತಹ ಆಟಗಾರರು ಭಾರತದ ಉತ್ತಮ ಆಟಗಾರರಾಗಿ ಹೊರಹೊಮ್ಮಬೇಕಾದರೆ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ಆಡಬೇಕು ಎಂದು ಭಾರತದ ಮಾಜಿ ನಾಯಕ ಹಾಗೂ ಬಿಸಿಸಿಐ ತಾಂತ್ರಿಕ ಸಮಿತಿಯ ಮುಖ್ಯಸ್ಥರಾಗಿರುವ ಸೌರವ್ ಗಂಗುಲಿ ಸಲಹೆ ನೀಡಿದ್ದಾರೆ.

ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಉಪಸ್ಥಿತಿಯಲ್ಲಿ ನಡೆದ ತಾಂತ್ರಿಕ ಸಮಿತಿಯ ಸಭೆಯಲ್ಲಿ ಮಾತನಾಡಿದ ಗಂಗುಲಿ, ಕೌಂಟಿ ಕ್ರಿಕೆಟ್‌ನಲ್ಲಿ ಆಡಿದ ಬಳಿಕವೇ ಝಹೀರ್ ಖಾನ್ ಉತ್ತಮ ವೇಗದ ಬೌಲರ್ ಆಗಿ ಮೂಡಿ ಬಂದಿದ್ದರು ಎಂದು ಉದಾರಣೆ ಸಹಿತ ವಿವರ ನೀಡಿದರು.

ಬೌಲರ್ ಆಗಿ ಝಹೀರ್ ಹೆಚ್ಚು ಪರಿಪಕ್ಷಗೊಂಡ ಬಳಿಕವೇ ಭಾರತ ತಂಡ ಆಸ್ಟ್ರೇಲಿಯ, ಪಾಕಿಸ್ತಾನ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕದಂತಹ ವಿದೇಶೀ ನೆಲದಲ್ಲಿ ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಯಿತು. ಐಪಿಎಲ್ ಋತು ಕೊನೆಗೊಂಡ ತಕ್ಷಣ ಜೂನ್‌ನಿಂದ ಆಗಸ್ಟ್ ತನಕ ಭಾರತೀಯ ಆಟಗಾರರು ಕೌಂಟಿ ತಂಡಗಳಲ್ಲಿ ಆಡಲು ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಬಿಸಿಸಿಐ ಕೌಂಟಿ ತಂಡಗಳೊಂದಿಗೆ ಮಾತುಕತೆ ನಡೆಸಬೇಕೆಂದು ಗಂಗುಲಿ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News