ಸ್ಪೇನ್‌ನ ಟೆನಿಸ್ ಪಟು ಜೊಕೊವಿಕ್‌ಗೆ ಜಾಕ್‌ಪಾಟ್
ವೃತ್ತಿಬದುಕಿನಲ್ಲಿ ಒಟ್ಟು 100 ಮಿಲಿಯನ್ ಯುಎಸ್ ಡಾಲರ್ ಬಹುಮಾನ (674.70 ಕೋ.ರೂ.) ಗಳಿಸಿದ ಸ್ಪೇನ್ ಆಟಗಾರ
ಪ್ಯಾರಿಸ್, ಜೂ.1: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ 10ನೆ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಈ ಮೂಲಕ ಒಟ್ಟು 100 ಮಿಲಿಯನ್ ಯುಎಸ್ ಡಾಲರ್(674.70 ಕೋ.ರೂ.) ಬಹುಮಾನ ಮೊತ್ತ ಸಂಪಾದಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಟೂರ್ನಿಯ ಆರಂಭಕ್ಕೆ ಮೊದಲು 29ರ ಹರೆಯದ ಸರ್ಬಿಯದ ಆಟಗಾರ ಜೊಕೊವಿಕ್ ಬ್ಯಾಂಕ್ ಖಾತೆಯಲ್ಲಿ 99,673,404 ಯುಎಸ್ ಡಾಲರ್ ಇತ್ತು. ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಿದ ಜೊಕೊವಿಕ್‌ಗೆ 294,000 ಯುರೋಸ್(328,303 ಡಾಲರ್) ಬಹುಮಾನ ಲಭಿಸುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಜೊಕೊವಿಕ್‌ರ ಒಟ್ಟು ಬಹುಮಾನ ಮೊತ್ತ ಬರೊಬ್ಬರಿ 100 ಮಿಲಿಯನ್ ಯುಎಸ್ ಡಾಲರ್ ದಾಟಿದೆ.
ಬುಧವಾರ ಮುಂದುವರಿದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜೊಕೊವಿಕ್ ಸ್ಪೇನ್‌ನ ರಾಬರ್ಟೊ ಬಾಟಿಸ್ಟಾ ಅಗುಟ್‌ರನ್ನು 3-6, 6-4, 6-1, 7-5 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಗೆಲುವಿನೊಂದಿಗೆ ಸತತ 28ನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದರು.
ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಝೆಕ್‌ನ ಥಾಮಸ್ ಬೆರ್ಡಿಕ್ ಅಥವಾ ಸ್ಪೇನ್‌ನ ಡೇವಿಡ್ ಫೆರರ್‌ರನ್ನು ಎದುರಿಸಲಿದ್ದಾರೆ.
ವಾವ್ರಿಂಕ ಸೆಮಿಫೈನಲ್‌ಗೆ
ಪ್ಯಾರಿಸ್, ಜೂ.1:ಹಾಲಿ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕ ಫ್ರೆಂಚ್ ಓಪನ್ಞ್‌ನ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ವಾವ್ರಿಂಕ ಸ್ಪೇನ್‌ನ ಅಲ್ಬರ್ಟ್ ರಾಮೊಸ್ ವಿನೊಲಸ್‌ರನ್ನು 6-2, 6-1, 7-6(9/7) ಸೆಟ್‌ಗಳ ಅಂತರದಿಂದ ಮಣಿಸಿದರು. 31ರ ಹರೆಯದ ವಾವ್ರಿಂಕ 1985ರ ಬಳಿಕ ಫ್ರೆಂಚ್ ಓಪನ್‌ನಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿದ ಮೊದಲ ಹಿರಿಯ ಆಟಗಾರ ಎನಿಸಿಕೊಂಡರು.
1985ರಲ್ಲಿ ಜಿಮ್ಮಿ ಕಾನರ್ಸ್ 32ರ ಹರೆಯದಲ್ಲಿ ಪ್ಯಾರಿಸ್‌ನಲ್ಲಿ ಅಂತಿಮ-4ರ ಘಟ್ಟ ತಲುಪಿದ್ದರು. ವಾವ್ರಿಂಕ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಮುಂದಿನ ಸುತ್ತಿನಲ್ಲಿ ಆ್ಯಂಡಿ ಮರ್ರೆ ಅಥವಾ ರಿಚರ್ಡ್ ಗಾಸ್ಕಟ್‌ರನ್ನು ಎದುರಿಸುವರು.