ಪುರುಷರ ಡಬಲ್ಸ್: ಪೇಸ್-ಬೋಪಣ್ಣ-ಸವಾಲು ಅಂತ್ಯ
ಪ್ಯಾರಿಸ್, ಜೂ.1: ಭಾರತದ ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ಫ್ರೆಂಚ್ ಓಪನ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸೋಲನುಭವಿಸುವ ಮೂಲಕ ಟೂರ್ನಿಯಿಂದ ಹೊರ ನಡೆದಿದ್ದಾರೆ.
ಬುಧವಾರ ಇಲ್ಲಿ ನಡೆದ ಮೊದಲ ಡಬಲ್ಸ್ ಪಂದ್ಯದಲ್ಲಿ 6ನೆ ಶ್ರೇಯಾಂಕದ ಬೋಪಣ್ಣ-ರೊಮಾನಿಯದ ಫ್ಲಾರಿನ್ ಮರ್ಗಿಯ ಕ್ರೋವೆಷಿಯದ ಇವಾನ್ ಡೊಡಿಗ್ ಹಾಗೂ ಬ್ರೆಝಿಲ್‌ನ ಮಾರ್ಸೆಲೊ ಮೆಲೊ ವಿರುದ್ಧ 4-6, 4-6 ನೇರ ಸೆಟ್‌ಗಳ ಅಂತರದಿಂದ ಶರಣಾದರು.
ಮತ್ತೊಂದು ಡಬಲ್ಸ್ ಪಂದ್ಯದಲ್ಲಿ ಪೊಲೆಂಡ್‌ನ ಜೊತೆಗಾರ ಮಾರ್ಸಿನ್ ಮಾಟ್ಕೊಸ್ಕಿ ಜೊತೆಗೂಡಿ ಆಡಿದ 16ನೆ ಶ್ರೇಯಾಂಕದ ಪೇಸ್ ಅಮೆರಿಕದ ಅವಳಿ ಸಹೋದರರಾದ ಮೈಕ್ ಹಾಗೂ ಬಾಬ್ ಬ್ರಯಾನ್ ವಿರುದ್ಧ 7-6(14-12), 6-3 ಸೆಟ್‌ಗಳ ಅಂತರದಿಂದ ಶರಣಾಗಿದ್ದಾರೆ.
ಸಾನಿಯಾ ಕ್ವಾ.ಫೈನಲ್‌ಗೆ
ಪ್ಯಾರಿಸ್, ಜೂ.1: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಫ್ರೆಂಚ್ ಓಪನ್‌ನ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಅತ್ಯಂತ ಪೈಪೋಟಿಯಿಂದ ಕೂಡಿದ್ದ 2ನೆ ಸುತ್ತಿನ ಪಂದ್ಯದಲ್ಲಿ 2ನೆ ಶ್ರೇಯಾಂಕದ ಸಾನಿಯಾ ಹಾಗೂ ಕ್ರೋವೆಷಿಯದ ಐವಾನ್ ಡೊಡಿಗ್ ಫ್ರೆಂಚ್‌ನ ಅಲಿಝ್ ಕಾರ್ನಟ್ ಹಾಗೂ ಜೋನಾಥನ್ ಎಸ್ಸೆರಿಕ್‌ರನ್ನು 6-7(6/8), 6-4, 10-8 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಸೆರೆನಾ ಕ್ವಾರ್ಟರ್ ಫೈನಲ್‌ಗೆ
ಪ್ಯಾರಿಸ್, ಜೂ.1: ಚಾಂಪಿಯನ್ ಸೆರೆನಾ ವಿಲಿಯಮ್ಸ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಸೆರೆನಾ ಉಕ್ರೇನ್‌ನ ಎಲಿನಾ ಸ್ವಿಟೊಲಿನಾರನ್ನು 6-1, 6-1 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.
ಅಮೆರಿಕದ ಆಟಗಾರ್ತಿ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಲು ಮುಂದಿನ ಸುತ್ತಿನಲ್ಲಿ ಕಾರ್ಲಾ ಸುಯರೆಝ್ ನವಾರ್ರೊ ಅಥವಾ ಯೂಲಿಯಾ ಪುಟಿಂಟ್‌ಝೆವಾರನ್ನು ಎದುರಿಸಲಿದ್ದಾರೆ.