×
Ad

ತೆಂಡುಲ್ಕರ್ ಮಾಲಕತ್ವದ ಕೇರಳ ಬ್ಲಾಸ್ಟರ್ಸ್‌ಗೆ ಚಿರಂಜೀವಿ, ನಾಗಾರ್ಜುನ ಸೇರ್ಪಡೆ

Update: 2016-06-01 23:05 IST

 ಕೊಚ್ಚಿ, ಜೂ.1: ಇಂಡಿಯನ್ ಸೂಪರ್ ಲೀಗ್‌ನ(ಐಎಸ್‌ಎಲ್)ಅತ್ಯಂತ ಜನಪ್ರಿಯ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದಾಗಿರುವ ಕೇರಳ ಬ್ಲಾಸ್ಟರ್ಸ್‌ ಕ್ಲಬ್‌ನ ಸಹ ಮಾಲಕರಾಗಿರುವ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಅವರೊಂದಿಗೆ ಭಾರತೀಯ ಸಿನಿಮಾರಂಗದ ಕೆಲವು ದಿಗ್ಗಜರು ಸೇರ್ಪಡೆಯಾಗಿದ್ದಾರೆ.

ಮೇಗಾಸ್ಟಾರ್ ಚಿರಂಜೀವಿ ಹಾಗೂ ಅಕ್ಕಿನೇನಿ ನಾಗಾರ್ಜುನ, ಪ್ರಮುಖ ಚಿತ್ರನಿರ್ಮಾಪಕರಾದ ಅಲ್ಲು ಅರವಿಂದ್ ಹಾಗೂ ಉದ್ಯಮಿ ಎನ್.ಪ್ರಸಾದ್ ಕೇರಳ ಬ್ಲಾಸ್ಟರ್ಸ್‌ನ ಮಾಲಕತ್ವ ಹೊಂದಿರುವ ಬ್ಲಾಸ್ಟರ್ಸ್‌ ಸ್ಪೋರ್ಟ್ಸ್ ಪ್ರೈ.ಲಿ.ನಲ್ಲಿ ಶೇರು ಖರೀದಿಸಿದ್ದಾರೆ.

 ಸಚಿನ್ ತೆಂಡುಲ್ಕರ್ ಕೇರಳ ಬ್ಲಾಸ್ಟರ್ಸ್‌ ತಂಡದ ಸಹ ಮಾಲಕನಾಗಿ ಮುಂದುವರಿಯಲಿದ್ದಾರೆ. ಕೇರಳ ಬ್ಲಾಸ್ಟರ್ಸ್‌ನ ಹೊಸ ಹೂಡಿಕೆದಾರರಾದ ಚಿರಂಜೀವಿ, ನಾಗಾರ್ಜುನ, ಅಲ್ಲು ಅರವಿಂದ್ ಹಾಗೂ ಎನ್. ಪ್ರಸಾದ್ ಕೇರಳ ಬ್ಲಾಸ್ಟರ್ಸ್‌ನ ಲಾಂಛನಕ್ಕೆ ಸಹಿ ಹಾಕಿದ್ದು, ಕೇರಳದ ನೂತನ ಮುಖ್ಯಮಂತ್ರಿ ಪಿ. ವಿಜಯನ್‌ರನ್ನು ಭೇಟಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News