×
Ad

ಒಲಿಂಪಿಕ್ಸ್‌ಗೆ ನರಸಿಂಗ ಹೆಸರನ್ನು ಕಳುಹಿಸಿದ ಕುಸ್ತಿ ಒಕ್ಕೂಟ

Update: 2016-06-02 20:34 IST

ಹೊಸದಿಲ್ಲಿ, ಜೂ.2: ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶಕ್ಕಾಗಿ ಭಾರತದ ಪ್ರಖ್ಯಾತಕುಸ್ತಿಪಟುಸುಶೀಲ್ ಕುಮಾರ್ ಹೈಕೋರ್ಟ್‌ನಲ್ಲಿಕಾನೂನಿನ ಹೋರಾಟ ನಡೆಸುತ್ತಿರುವಾಗಲೇ, ಭಾರತದಕುಸ್ತಿ ಒಕ್ಕೂಟ (ಡಬ್ಲುಎಫ್‌ಐ) ನರಸಿಂಗ್ ಯಾದವ್ ಅವರ ಹೆಸರನ್ನು ಒಲಿಂಪಿಕ್ಸ್‌ಗೆಶಿಫಾರಸ್ಸುಮಾಡಿದೆ.
 ಯಾದವ್ ಅವರು 74 ಕೆ.ಜಿ. ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆಂದು ಭಾರತದಕುಸ್ತಿ ಫೆಡರೇಶನ್ ಇಂದುಡಿಲ್ಲಿಹೈಕೋರ್ಟ್‌ಗೆ ತಿಳಿಸಿದೆ.
74 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶಕ್ಕಾಗಿ ತನ್ನ ಮತ್ತು ನರಸಿಂಗ್ ಯಾದವ್ ಜೊತೆಟ್ರಯಲ್ಸ್ ನಡೆಸುವಂತೆಸುಶೀಲ್ ಕುಮಾರ್ ಕುಸ್ತಿ ಒಕ್ಕೂಟಕ್ಕೆಮನವಿಮಾಡಿದ್ದರು.ಆದರೆಕುಸ್ತಿ ಒಕ್ಕೂಟ ಅವರ ಮನವಿಯನ್ನು ತಿರಸ್ಕರಿಸಿತ್ತು. ಈ ಕಾರಣದಿಣಂದಾಗಿಸುಶೀಲ್ ಕುಮಾರ್ ಹೈಕೋರ್ಟ್ ಮೊರೆಹೋಗಿದ್ದರು.
ಸುಶೀಲ್ ಕುಮಾರ್ ಮತ್ತು ಕುಸ್ತಿ ಫೆಡರೇಶನ್ ಪರ ವಾದವನ್ನು ಆಲಿಸಿರುವ ನ್ಯಾಯಮೂರ್ತಿಮನಮೋಹನ್ ಅವರು ತೀರ್ಪನ್ನು ಜೂ.6ಕ್ಕೆ ಕಾಯ್ದಿರಿಸಿದ್ದಾರೆ.
‘‘ಸುಶೀಲ್ ಕುಮಾರ್ ಅವರನ್ನು ಭಾರತದಕುಸ್ತಿಪಟುಗಳೊಂದಿಗೆತರಬೇತಿಗಾಗಿಜಾರ್ಜಿಯಕ್ಕೆಕಳುಹಿಸಲಾಗಿತ್ತು.ಆದರೆಅವರು ಭಾರತದಕುಸ್ತಿಪಟುಗಳ ಶಿಬಿರದಿಂದ ದೂರವಾಗಿಸಾರ್ವಜನಿಕಹಣವನ್ನು ದುರ್ಬಲಕೆಮಾಡಿದ್ದಾರೆ’’ ಎಂದುಕುಸ್ತಿ ಒಕ್ಕೂಟ ನ್ಯಾಯಾಲಯಕ್ಕೆ ತಿಳಿಸಿದೆ.
 ‘‘ ಸುಶೀಲ್ ಕುಮಾರ್ ಮತ್ತು ನರಸಿಂಗ ಯಾದವ್ ಬಗ್ಗೆ ನನಗೆಗೌರವಇದೆ. ಆದರೆ ನರಸಿಂಗ ಯಾದವ್ ಅವರುಈಗಾಗಲೇ ಒಲಿಂಪಿಕ್ಸ್‌ಗೆಅರ್ಹತೆ ಪಡೆದಿರುವಾಗಅವರಿಗೆಹೇಗೆಅನ್ಯಾಯಮಾಡಲು ಸಾಧ್ಯ. ಅರ್ಹತೆ ಪಡೆದಿರುವ ಎಲ್ಲ ಅಥ್ಲೀಟ್‌ಗಳ ಹೆಸರನ್ನು ಮೇ 3ರಂದು ಕಳಹಿಸಲಾಗಿದೆ. ನರಸಿಂಗಹೆಸರುಕಳುಹಿಸಿರುವ ಹಿನ್ನೆಲೆಯಲ್ಲಿ ಆ ವಿಭಾಗದ ಸ್ಪರ್ಧೆಗೆ ಇನ್ನೊಬ್ಬ ಕುಸ್ತಿಪಟುವನ್ನು ಕಳುಹಿಸಲು ಸಾಧ್ಯವಿಲ್ಲ’’ ಎಂದುಕುಸ್ತಿ ಒಕ್ಕೂಟದವಕೀಲರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News