×
Ad

ಸ್ಪೇನ್ ಯುರೋಕಪ್ ಗೆಲ್ಲುವುದು ನಿಶ್ಚಿತ: ವಿನ್ಸೆಂಟ್

Update: 2016-06-02 23:42 IST

ಪ್ಯಾರಿಸ್, ಜೂ.2: ಮುಂಬರುವ ಯುರೋಪಿಯನ್ ಚಾಂಪಿಯನ್‌ಶಿಪ್‌ಗೆ ಸ್ಪೇನ್ ತಂಡದ ಸಿದ್ಧತೆಯ ಬಗ್ಗೆ ತೃಪ್ತಿವ್ಯಕ್ತಪಡಿಸಿರುವ ಕೋಚ್ ವಿನ್ಸೆಂಟ್ ಡಿ ಬಾಸ್ಕ್, ಫ್ರಾನ್ಸ್‌ನ ಆತಿಥ್ಯದಲ್ಲಿ ನಡೆಯಲಿರುವ ಈ ಬಾರಿಯ ಯುರೋ ಕಪ್‌ನಲ್ಲಿ ಸ್ಪೇನ್ ತಂಡ ಪ್ರಶಸ್ತಿ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ‘‘ನಾಲ್ಕು ವರ್ಷಗಳ ಹಿಂದೆ ಯುರೋ ಪ್ರಶಸ್ತಿಯನ್ನು ನಾವು ಗೆದ್ದುಕೊಂಡಿದ್ದೆವು. ಆ ಹಿನ್ನೆಲೆಯಲ್ಲಿ ಈ ಬಾರಿಯೂ ಯುರೋ 2016ರಲ್ಲಿ ನಾವೇ ಫೇವರಿಟ್. ಇತರ ತಂಡಗಳು ಸ್ಪರ್ಧೆಯಲ್ಲಿವೆ. ಆದರೆ ಮತ್ತೊಮ್ಮೆ ಚಾಂಪಿಯನ್ ಆಗುವುದು ನಮ್ಮ ಕನಸು’’ ಎಂದು ಸ್ಪೇನ್ ತಂಡವು ಪ್ರದರ್ಶನ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 6-1 ರಿಂದ ಮಣಿಸಿದ ಬಳಿಕ ಸುದ್ದಿಗಾರರಿಗೆ ವಿನ್ಸೆಂಟ್ ತಿಳಿಸಿದರು.

ಸ್ಪೇನ್ ತಂಡ ಜೂ.13 ರಂದು ಝೆಕ್ ಗಣರಾಜ್ಯ ತಂಡವನ್ನು ಎದುರಿಸುವ ಮೂಲಕ ಯುರೋ ಕಪ್ ಅಭಿಯಾನವನ್ನು ಆರಂಭಿಸಲಿದೆ. ಸ್ಪೇನ್ ತಂಡ ಡಿ ಗುಂಪಿನಲ್ಲಿದ್ದು, ಟರ್ಕಿ ಹಾಗೂ ಕ್ರೊವೇಷಿಯ ಕೂಡ ಇದೇ ಗುಂಪಿನಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News