ಜುಡೋ ಪಟು ಅವತಾರ್ ಸಿಂಗ್‌ಗೆ ಒಲಿಂಪಿಕ್ಸ್ ಟಿಕೆಟ್
ಹೊಸದಿಲ್ಲಿ, ಜೂ.4: ಭಾರತದ ಅಗ್ರ ಜುಡೋ ಪಟು ಅವತಾರ್ ಸಿಂಗ್ ಅಂಡರ್-90 ಕೆಜಿ ತೂಕದ ವಿಭಾಗದಲ್ಲಿ 2016ರ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಜುಡೋ ಒಕ್ಕೂಟ ಶನಿವಾರ ದೃಢಪಡಿಸಿದೆ.
ಅಂತಾರಾಷ್ಟ್ರೀಯ ಜುಡೋ ಫೆಡರೇಶನ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಅವತಾರ್ ಸಿಂಗ್ ಉಪಖಂಡದ ಕೋಟಾದಡಿ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ ಎಂದು ಭಾರತದ ಜುಡೋ ಫೆಡರೇಶನ್ ಅಧ್ಯಕ್ಷ ಮುಕೇಶ್ ಕುಮಾರ್ ತಿಳಿಸಿದ್ದಾರೆ.
ಪಂಜಾಬ್‌ನ ಗುರುದಾಸ್‌ಪುರದ ಅವತಾರ್ ಸಿಂಗ್ ಪ್ರಸ್ತುತ ಪಂಜಾಬ್‌ನ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅವತಾರ್ ಫೆಬ್ರವರಿಯಲ್ಲಿ ಶಿಲ್ಲಾಂಗ್‌ನಲ್ಲಿ ನಡೆದ ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. 2011ರ ಏಷ್ಯನ್ ಜೂನಿಯರ್ ಜುಡೋ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. 2013-14 ಹಾಗೂ 2014-15ರಲ್ಲಿ ನಡೆದ ಹಿರಿಯರ ರಾಷ್ಟ್ರೀಯ ಜುಡೋ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ.