×
Ad

ಫ್ರೆಂಚ್ ಓಪನ್ ಚಾಂಪಿಯನ್ ಮುಗುರುಝಾ ಪರಿಚಯ

Update: 2016-06-05 00:08 IST

ಪ್ಯಾರಿಸ್, ಜೂ.4: ಫ್ರೆಂಚ್ ಓಪನ್‌ನಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್‌ರನ್ನು 7-5, 6-4 ಸೆಟ್‌ಗಳ ಅಂತರದಿಂದ ಮಣಿಸಿದ ಸ್ಪೇನ್‌ನ ಗಾರ್ಬೈನ್ ಮುಗುರುಝಾ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದರು. ಮಾತ್ರವಲ್ಲ ವಿಶ್ವದ ಗಮನ ತನ್ನತ್ತ ಸೆಳೆದರು.

ಮುಗುರುಝಾ ಕಿರು ಪರಿಚಯ ಇಲ್ಲಿದೆ.... ಜನನ: ವೆನೆಝುವೆಲಾ, ಅಕ್ಟೋಬರ್ 8, 1993(ವಯಸ್ಸು 22)

ಗ್ರಾನ್‌ಸ್ಲಾಮ್ ಕೂಟದಲ್ಲಿ ಸಾಧನೆ: ಆಸ್ಟೇಲಿಯನ್ ಓಪನ್-ನಾಲ್ಕನೆ ಸುತ್ತು(2014-15), ಫ್ರೆಂಚ್ ಓಪನ್-ವಿನ್ನರ್ 2016, ವಿಂಬಲ್ಡನ್-ರನ್ನರ್-ಅಪ್(2015), ಯುಎಸ್ ಓಪನ್-ಎರಡನೆ ಸುತ್ತು(2015).

 *ಮುಗುರುಝ 18ವರ್ಷಗಳ ಬಳಿಕ ಫ್ರೆಂಚ್ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ ಸ್ಪೇನ್‌ನ ಮೊದಲ ಆಟಗಾರ್ತಿ. ಅರೆಂಕ್ಸಾ ಸ್ಯಾಂಚೆಝ್-ವಿಕಾರಿಯೊ 1998ರಲ್ಲಿ ಪ್ರಶಸ್ತಿ ಜಯಿಸಿದ್ದರು.

*ಶನಿವಾರ ಮೊದಲ ಬಾರಿ ಆವೆಮಣ್ಣಿನ ಅಂಗಳದಲ್ಲಿ ಫೈನಲ್ ಆಡಿದ್ದಾರೆ.

*ಮುಗುರುಝಾ ಫೈನಲ್‌ಗೆ ತಲುಪುವ ಮೊದಲು ಮೊದಲ ಸುತ್ತಿನಲ್ಲಿ ಸ್ಲೋವಾಕಿಯದ ಅನ್ನಾ ಕಾರೊಲಿನಾ ವಿರುದ್ಧ ಮಾತ್ರ ಒಂದು ಸೆಟ್‌ನ್ನು ಸೋತಿದ್ದರು.

*ಮುಗುರುಝಾ 2014ರಲ್ಲಿ ಫ್ರೆಂಚ್ ಓಪನ್‌ನ ಎರಡನೆ ಸುತ್ತಿನಲ್ಲಿ ಸೆರೆನಾ ವಿಲಿಯಮ್ಸ್‌ರನ್ನು 6-2, 6-2 ಸೆಟ್‌ಗಳ ಅಂತರದಿಂದ ಮಣಿಸಿದ್ದರು.

* ಮುಗುರುಝಾ ಶನಿವಾರ ಪ್ರಮುಖ ಮಹಿಳಾ ಟೂರ್ನಿಯಲ್ಲಿ ಮೂರನೆ ಪ್ರಶಸ್ತಿ ಗೆದ್ದುಕೊಂಡರು. 2014ರಲ್ಲಿ ಹೊಬರ್ಟ್ ಇಂಟರ್‌ನ್ಯಾಶನಲ್ ಹಾಗೂ 2015ರಲ್ಲಿ ಚೀನಾ ಓಪನ್ ಜಯಿಸಿದ್ದರು.

* ಮುಗುರುಝಾಗೆ ಬಾಲ್ಯದಲ್ಲಿ ಸೆರೆನಾ ವಿಲಿಯಮ್ಸ್ ಹಾಗೂ ಪೀಟ್ ಸಾಂಪ್ರಸ್ ನೆಚ್ಚಿನ ಟೆನಿಸ್ ಆಟಗಾರರು.

*ಮುಗುರುಝ ತಾಯಿ ವೆನೆಝುವೆಲಾ ಹಾಗೂ ತಂದೆ ಸ್ಪೇನ್ ದೇಶದವರು.

*3ನೆ ವಯಸ್ಸಿನಲ್ಲಿ ಟೆನಿಸ್ ಆಡಲು ಆರಂಭ

*ಬಾರ್ಸಿಲೋನ ಸಮೀಪದ ಟೆನಿಸ್ ಅಕಾಡೆಮಿಯಲ್ಲಿ ತರಬೇತಿ.

* 2011ರಲ್ಲಿ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟರು. ಐಟಿಎಫ್‌ನಲ್ಲಿ ನಾಲ್ಕು ಪ್ರಶಸ್ತಿ ಜಯಿಸಿದರು.

*2011ರಲ್ಲಿ ಹೊಬರ್ಟ್‌ನಲ್ಲಿ ಚೊಚ್ಚಲ ಸಿಂಗಲ್ಸ್ ಪ್ರಶಸ್ತಿ ಜಯಿಸಿದರು.

*2015ರಲ್ಲಿ ಬೀಜಿಂಗ್ ಓಪನ್ ಜಯಿಸಿದರು. ವಿಂಬಲ್ಡನ್ ಫೈನಲ್ ತಲುಪಿದರು ಹಾಗೂ ಡಬ್ಲ್ಯುಟಿಎ ಫೈನಲ್ಸ್‌ಗೆ ಅರ್ಹತೆ ಪಡೆದು ಸೆಮಿಫೈನಲ್ ತನಕ ತಲುಪಿದರು.

*2015ರ ಅಂತ್ಯಕ್ಕೆ ವಿಶ್ವ ಟೆನಿಸ್ ರ್ಯಾಂಕಿಂಗ್‌ನಲ್ಲಿ 3ನೆ ಸ್ಥಾನ ತಲುಪಿದರು.

*2016ರಲ್ಲಿ ರೋಮ್ ಓಪನ್‌ನ ಸೆಮಿಫೈನಲ್‌ನಲ್ಲಿ ವಿಕ್ಟೋರಿಯಾ ಅಝರೆಂಕಾ ವಿರುದ್ಧ ವೀರೋಚಿತ ಸೋಲು.

* ಪ್ರಸ್ತುತ ಜಿನೇವಾದಲ್ಲಿ ವಾಸ್ತವ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News