ಈಡನ್‌ಗಾರ್ಡನ್ಸ್‌ನಲ್ಲಿ ಪಿಂಕ್ ಬಾಲ್ ಟ್ರಯಲ್
ಹೊಸದಿಲ್ಲಿ, ಜೂ.7: ಕೋಲ್ಕತಾದ ಪ್ರತಿಷ್ಠಿತ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಈ ತಿಂಗಳು ಮೊದಲ ಬಾರಿ ಅಧಿಕೃತ ಪಿಂಕ್ ಬಾಲ್ ಬಳಸಿ ಪಂದ್ಯವನ್ನು ಆಡಲಾಗುತ್ತದೆ ಎಂದು ವರದಿಯಾಗಿದೆ.
ಕೋಲ್ಕತಾದಲ್ಲಿ ಜೂ.17 ರಿಂದ 20ರ ತನಕ ನಡೆಯಲಿರುವ ಸೂಪರ್ ಲೀಗ್ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ) ಅಧ್ಯಕ್ಷ ಸೌರವ್ ಗಂಗುಲಿ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಆಂಗ್ಲಪತ್ರಿಕೆ ವರದಿ ಮಾಡಿದೆ.
ಕಳೆದ ವರ್ಷ ಆಸ್ಟ್ರೇಲಿಯದಲ್ಲಿ ಪಿಂಕ್ ಬಾಲ್ ಬಳಸಿ ಆಡಿದ್ದ ಟೆಸ್ಟ್ ಪಂದ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಾವು ಬದಲಾವಣೆಗೆ ಹೊಂದಿಕೊಳ್ಳಬೇಕಾಗಿದೆ. ಸದ್ಯೋಭವಿಷ್ಯದಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಯೋಜಿಸುವ ದೃಷ್ಟಿಯಿಂದ ಸೂಪರ್ ಲೀಗ್ ಫೈನಲ್‌ನಲ್ಲಿ ಪ್ರಯೋಗ ನಡೆಸಲಾಗುವುದು ಎಂದು ಬಿಸಿಸಿಐ ತಾಂತ್ರಿಕ ಸಮಿತಿ ಚೇರ್‌ಮನ್ ಆಗಿರುವ ಗಂಗುಲಿ ಹೇಳಿದ್ದಾರೆ.
ಕೋಲ್ಕತಾ ಮೂಲದ ಟೂರ್ನಿ ಸೂಪರ್ ಲೀಗ್‌ನಲ್ಲಿ ಸ್ಥಳೀಯ ಪ್ರತಿಭಾವಂತ ಆಟಗಾರರು ಆಡುತ್ತಿದ್ದಾರೆ.