×
Ad

ಬಾಂಗ್ಲಾ ಬೌಲಿಂಗ್ ಕೋಚ್ ಪ್ರಸ್ತಾವ ತಿರಸ್ಕರಿಸಿದ ಪಾಕ್ ಮಾಜಿ ವೇಗಿ ಆಖಿಬ್ ಜಾವೇದ್

Update: 2016-06-07 23:46 IST

ಢಾಕಾ, ಜೂ.7: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ನೀಡಿದ್ದ ಬೌಲಿಂಗ್ ಕೋಚ್ ಪ್ರಸ್ತಾವವನ್ನು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಆಖಿಬ್ ಜಾವೇದ್ ತಿರಸ್ಕರಿಸಿದ್ದಾರೆ.

ಜಾವೇದ್ ಇ-ಮೇಲ್ ಮೂಲಕ ತನ್ನ ನಿರ್ಧಾರವನ್ನು ಬಿಸಿಬಿಗೆ ತಿಳಿಸಿದ್ದಾರೆ ಎಂದು ಬಿಡಿನ್ಯೂಸ್24 ಡಾಟ್‌ಕಾಮ್ ತಿಳಿಸಿದೆ.

‘‘ಬಾಂಗ್ಲಾದೇಶಕ್ಕೆ ಬರಲು ತನ್ನಿಂದ ಸಾಧ್ಯವಿಲ್ಲ ಎಂದು ಜಾವೇದ್ ನಮಗೆ ಮಾಹಿತಿ ನೀಡಿದ್ದಾರೆ. ನಾವು ಆ ಬಗ್ಗೆ ಹೆಚ್ಚು ಚಿಂತಿತರಾಗಿಲ್ಲ. ಅವರು ಮಾತ್ರ ನಮ್ಮ ಆಯ್ಕೆಯಲ್ಲ. ನಮ್ಮಲ್ಲಿ ಇನ್ನಷ್ಟು ಯೋಜನೆಗಳಿವೆ. ನಾವು ಉಳಿದ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸುವೆವು’’ ಎಂದು ಬಿಸಿಬಿ ಕ್ರಿಕೆಟ್ ಆಪರೇಶನ್ ಕಮಿಟಿ ಚೇರ್‌ಮನ್ ಅಕ್ರಂ ಖಾನ್ ತಿಳಿಸಿದ್ದಾರೆ.

ಶ್ರೀಲಂಕಾದ ಚಾಂಪಕಾ ರಾಮನಾಯಕೆ ಹಾಗೂ ಚಾಮಿಂಡಾ ವಾಸ್, ಜಾವೇದ್ ಹಾಗೂ ಭಾರತದ ವೆಂಕಟೇಶ್ ಪ್ರಸಾದ್ ಅವರಿಗೆ ಬೌಲಿಂಗ್ ಕೋಚ್ ಹುದ್ದೆ ಪ್ರಸ್ತಾವವನ್ನು ನೀಡಲಾಗಿದೆ ಎಂದು ಈ ಮೊದಲು ಅಕ್ರಂ ಹೇಳಿದ್ದರು.

ಎಪ್ರಿಲ್‌ನಲ್ಲಿ ಯುಎಇ ತಂಡದೊಂದಿಗೆ ಒಪ್ಪಂದವನ್ನು ಕೊನೆಗೊಳಿಸಿರುವ ಪಾಕಿಸ್ತಾನದ 43ರ ಹರೆಯದ ಜಾವೇದ್‌ರಿಗೆ ಪ್ರಸ್ತಾವ ಕಳುಹಿಸಿಕೊಡಲಾಗಿದೆ ಎಂದು ಬಿಸಿಬಿ ಅಧ್ಯಕ್ಷ ನಝ್ಮುಲ್ ಹಸನ್ ರವಿವಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News