×
Ad

2019ರ ಕೋಪಾ ಅಮೆರಿಕ ಟೂರ್ನಿಗೆ ಬ್ರೆಝಿಲ್ ಆತಿಥ್ಯ

Update: 2016-06-08 23:32 IST

ರಿಯೋ ಡಿಜನೈರೊ, ಜೂ.8: ಬ್ರೆಝಿಲ್ 2019ರ ಕೋಪಾ ಅಮೆರಿಕ ಟೂರ್ನಿಯ ಆತಿಥ್ಯವಹಿಸಿಕೊಳ್ಳಲಿದೆ ಎಂದು ದಕ್ಷಿಣ ಅಮೆರಿಕದ ಫುಟ್ಬಾಲ್ ಆಡಳಿತ ಮಂಡಳಿ ತಿಳಿಸಿದೆ.

ಬ್ರೆಝಿಲ್ ಐದನೆ ಬಾರಿ ಕೊಪಾ ಅಮೆರಿಕ ಟೂರ್ನಿಯ ಆತಿಥ್ಯವಹಿಸಿಕೊಂಡಿದೆ. 1919, 1992, 1949 ಹಾಗೂ 1989ರ ಆವೃತ್ತಿಯ ಟೂರ್ನಿಯ ಆತಿಥ್ಯವಹಿಸಿಕೊಂಡಿದ್ದ ಬ್ರೆಝಿಲ್ ಈ ಎಲ್ಲ ಆವೃತ್ತಿಯಲ್ಲೂ ಚಾಂಪಿಯನ್ ಆಗಿತ್ತು.

100ನೆ ಆವೃತ್ತಿ ಕೊಪಾ ಅಮೆರಿಕ ಟೂರ್ನಿಯು ಈಗ ಅಮೆರಿಕದಲ್ಲಿ ನಡೆಯುತ್ತಿದೆ. 1916ರಲ್ಲಿ ಬ್ಯುನಸ್ ಐರಿಸ್‌ನಲ್ಲಿ ಚೊಚ್ಚಲ ಆವೃತ್ತಿ ನಡೆದಿದ್ದು, ಆ ಟೂರ್ನಿಯನ್ನು ಉರುಗ್ವೆ ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News