×
Ad

ಪ್ರಥಮ ಹಗಲು-ರಾತ್ರಿ ಟೆಸ್ಟ್‌ಗೆ ಈಡನ್‌ಗಾರ್ಡನ್ ಸ್ಟೇಡಿಯಂ ಆತಿಥ್ಯ

Update: 2016-06-09 22:50 IST

ಕೋಲ್ಕತಾ, ಜೂ.9: ಭಾರತ ತಂಡ ಈ ವರ್ಷಾಂತ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ್ದ ಮೊತ್ತ ಮೊದಲ ಬಾರಿ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಲಿದ್ದು, ಐತಿಹಾಸಿಕ ಈಡನ್‌ಗಾರ್ಡನ್ ಸ್ಟೇಡಿಯಂ ಈ ಮಹತ್ವದ ಪಂದ್ಯದ ಆತಿಥ್ಯವನ್ನು ವಹಿಸಿಕೊಳ್ಳಲಿದೆ.

ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಹೊನಲು-ಬೆಳಕಿನಡಿ ಟೆಸ್ಟ್ ಪಂದ್ಯ ನಡೆಯಲಿದೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ) ಅಧಿಕಾರಿ ಗುರುವಾರ ದೃಢಪಡಿಸಿದ್ದಾರೆ.

ಬಿಸಿಸಿಐನ ಟೂರ್ ಪ್ರೋಗ್ರಾಮ್ ಹಾಗೂ ವೇಳಾಪಟ್ಟಿ ನಿಗದಿ ಸಮಿತಿ ಗುರುವಾರ ವೇಳಾಪಟ್ಟಿ ಪ್ರಕಟಿಸಿದ್ದು, ನ್ಯೂಝಿಲೆಂಡ್ ತಂಡ ಭಾರತದ ವಿರುದ್ಧ ಮೂರು ಟೆಸ್ಟ್ ಹಾಗೂ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

ಟೆಸ್ಟ್ ಪಂದ್ಯಗಳು ಕೋಲ್ಕತ್ತಾವಲ್ಲದೆ, ಇಂದೋರ್, ಕಾನ್ಪುರ ಹಾಗೂ ಕೋಲ್ಕತಾದಲ್ಲಿ ನಡೆಯಲಿವೆ.

ನಾವು ಹಗಲು-ರಾತ್ರಿ ಟೆಸ್ಟ್ ಪಂದ್ಯ ಆತಿಥ್ಯವಹಿಸಿಕೊಳ್ಳುವ ಬಗ್ಗೆ ಬಿಸಿಸಿಐಗೆ ಪತ್ರವನ್ನು ಬರೆದಿದ್ದು, ನಮ್ಮ ಕೋರಿಕೆಯನ್ನು ಅವರು ಸ್ವೀಕರಿಸಿದ್ದಾರೆ. ಈಡನ್‌ಗಾರ್ಡನ್ಸ್ ನ್ಯೂಝಿಲೆಂಡ್ ವಿರುದ್ಧ ಡೇ-ನೈಟ್ ಟೆಸ್ಟ್ ಪಂದ್ಯ ಆತಿಥ್ಯವಹಿಸಿಕೊಳ್ಳುತ್ತಿರುವುದು ನಿಜವಾಗಿಯೂ ಸಿಹಿ ಸುದ್ದಿಯಾಗಿದೆ ಎಂದು ಸಿಎಬಿ ಅಧಿಕಾರಿಗಳು ತಿಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯ ಬಳಿಕ ನ್ಯೂಝಿಲೆಂಡ್ ವಿರುದ್ಧದ ಸರಣಿ ಆರಂಭವಾಗಲಿದೆ. ಭಾರತ ಮುಂಬರುವ ಋತುವಿನಲ್ಲಿ ಒಟ್ಟು 13 ಟೆಸ್ಟ್ ಪಂದ್ಯಗಳನ್ನು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News