×
Ad

ಮೂರನೆ ಟೆಸ್ಟ್: ಇಂಗ್ಲೆಂಡ್ 416 ರನ್

Update: 2016-06-10 23:40 IST

ಬೈರ್‌ಸ್ಟೋ ಭರ್ಜರಿ ಶತಕ

ಲಂಡನ್, ಜೂ.10: ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಬೈರ್‌ಸ್ಟೋ ಔಟಾಗದೆ ಬಾರಿಸಿದ ಭರ್ಜರಿ ಶತಕದ(167) ನೆರವಿನಿಂದ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧದ 3ನೆ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 416 ರನ್ ಕಲೆ ಹಾಕಿದೆ.

ಇಂಗ್ಲೆಂಡ್ ಪರ ನಾಯಕ ಅಲೆಸ್ಟೈರ್ ಕುಕ್(85 ರನ್) ಹಾಗೂ ಕ್ರಿಸ್ ವೋಕ್ಸ್(66 ರನ್) ಅರ್ಧಶತಕದ ಕೊಡುಗೆ ನೀಡಿದ್ದರು. ಇಂಗ್ಲೆಂಡ್ 84 ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು. ಆಗ ಕುಕ್ ಅವರೊಂದಿಗೆ 5ನೆ ವಿಕೆಟ್‌ಗೆ 80 ರನ್ ಸೇರಿಸಿದ ಬೈರ್‌ಸ್ಟೋ(167 ರನ್, 251 ಎಸೆತ, 18 ಬೌಂಡರಿ) ತಂಡವನ್ನು ಆಧರಿಸಿದರು.

2ನೆ ದಿನದಾಟವಾದ ಶುಕ್ರವಾರ ಆಲ್‌ರೌಂಡರ್ ವೋಕ್ಸ್ ಅವರೊಂದಿಗೆ 7ನೆ ವಿಕೆಟ್ ಜೊತೆಯಾಟದಲ್ಲಿ 144 ರನ್ ಸೇರಿಸಿದ ಬೈರ್‌ಸ್ಟೋ ತಂಡದ ಸ್ಕೋರ್‌ನ್ನು 400ರ ಗಡಿ ದಾಟಿಸಿದರು.

ಶ್ರೀಲಂಕಾದ ಬೌಲಿಂಗ್‌ನಲ್ಲಿ ರಂಗನಾ ಹೆರಾತ್(4-81), ಲಕ್ಮಲ್(3-90) ಹಾಗೂ ಪ್ರದೀಪ್(2-104) 9 ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News