×
Ad

ಆಸ್ಟ್ರೇಲಿಯನ್ ಓಪನ್ ಸೂಪರ್ ಸರಣಿ:ಸೈನಾ, ಶ್ರೀಕಾಂತ್ ಸೆಮಿ ಫೈನಲ್‌ಗೆ

Update: 2016-06-10 23:46 IST

ಸಿಡ್ನಿ, ಜೂ.10: ಆಸ್ಟ್ರೇಲಿಯನ್ ಓಪನ್ ಸೂಪರ್ ಸರಣಿಯಲ್ಲಿ ಭಾರತದ ಸೈನಾ ನೆಹ್ವಾಲ್ ಹಾಗೂ ಕೆ. ಶ್ರೀಕಾಂತ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೈನಾ ಎರಡನೆ ಶ್ರೇಯಾಂಕಿತೆ ಥಾಯ್ಲೆಂಡ್‌ನ ರಟ್ಚಾನೊಕ್ ಇಂತನಾನ್ ವಿರುದ್ಧ 28-26, 21-16 ಗೇಮ್‌ಗಳ ಅಂತರದಿಂದ ಗೆಲುವು ಸಾಧಿಸಿದರು.

ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆ.ಶ್ರೀಕಾಂತ್ ಹೀ ಹಿಯೊ ಕ್ವಾಂಗ್‌ರನ್ನು 21-18, 21-17 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್‌ನ ವಿಟ್ಟಿಂಗಸ್ ಹ್ಯಾನ್ಸ್-ಕ್ರಿಸ್ಟಿಯನ್‌ರನ್ನು ಎದುರಿಸಲಿದ್ದಾರೆ.

ಸೈನಾ ಅವರು ಇಂತನಾನ್ ವಿರುದ್ಧ ಮೊದಲ ಗೇಮ್‌ನ ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರು. ತಕ್ಷಣವೇ ಎಚ್ಚೆತ್ತುಕೊಂಡ ಸೈನಾ ಕೇವಲ 56 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡರು. ಈ ಫಲಿತಾಂಶದ ಮೂಲಕ ಸೈನಾ ಅವರು ಇಂತನಾನ್ ವಿರುದ್ಧ 7-5 ಹೆಡ್-ಟು-ಹೆಡ್ ದಾಖಲೆ ಕಾಯ್ದುಕೊಂಡರು.

ವಿಶ್ವದ ನಂ.7ನೆ ಆಟಗಾರ್ತಿ ಸೈನಾ ಶನಿವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ 4ನೆ ಶ್ರೇಯಾಂಕದ ಯಿಹಾನ್ ವಾಂಗ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News