×
Ad

ಝಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2016-06-11 16:38 IST

 ಹರಾರೆ, ಜೂ.11: ಲೋಕೇಶ್‌ ರಾಹುಲ್‌ ದಾಖಲಿಸಿದ ಶತಕ  ಮತ್ತು ಅಂಬಟಿ ರಾಯುಡು  ಅವರ ಅರ್ಧಶತಕದ ನೆರವಿನಲ್ಲಿ ಭಾರತ ಕ್ರಿಕೆಟ್‌ ತಂಡ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ 9ವಿಕೆಟ್‌ಗಳ ಜಯ ಗಳಿಸಿದೆ.
ಹರಾರೆ ಸ್ಫೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 169 ರನ್‌ಗಳ ಸವಾಲು ಪಡೆದ  ಭಾರತ ಇನ್ನೂ 45 ಎಸೆತಗಳು ಬಾಕಿ ಇರುವಾಗಲೇ 1 ವಿಕೆಟ್‌ ನಷ್ಟದಲ್ಲಿ 173 ರನ್‌ ಗಳಿಸಿ ಗೆಲುವಿನ ದಡ ಸೇರಿತು.
ಕೆ.ಎಲ್‌ ರಾಹುಲ್‌ ಔಟಾಗದೆ 100 ರನ್‌(115ಎ, 7ಬೌ, 1ಸಿ) ಮತ್ತು ಅಂಬಟಿ ರಾಯುಡು ಔಟಾಗದೆ 62ರನ್‌(120ಎ,5ಬೌ) ಗಳಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಝಿಂಬಾಬ್ವೆ ತಂಡ 49.5  ಓವರ್ ಗಳಲ್ಲಿ 168ರನ್ ಗೆ ಆಲೌಟಾಯಿತು.

ಝಿಂಬಾಬ್ವೆ ಪರ ಎಲ್ಟನ್ ಚಿಗುಂಬುರಾ(41) ಗರಿಷ್ಠ ರನ್ ದಾಖಲಿಸಿದರು.

ಭಾರತದ ಜಸ್ಪ್ರೀತ್  ಬುಮ್ರಾ 28ಕ್ಕೆ 4 ವಿಕೆಟ್ ಉಡಾಯಿಸಿದರು.  ಧವಳ್‌ ಕುಲಕರ್ಣಿ ಮತ್ತು ಸ್ರಾನ್ ತಲಾ ಎರಡು ವಿಕೆಟ್ , ಅಕ್ಷರ್ ಪಟೇಲ್, ಚಾಹಲ್ ತಲಾ ಒಂದು ವಿಕೆಟ್ ಉಡಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News