ಚೊಚ್ಚಲ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ರಾಹುಲ್

Update: 2016-06-12 09:59 GMT

 ಹರಾರೆ, ಜೂ.12: ಕನ್ನಡಿಗ ಲೋಕೇಶ್ ರಾಹುಲ್ ಶನಿವಾರ ಹರಾರೆಯಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ(100) ದಾಖಲಿಸುವ ಮೂಲಕ ಆಡಿದ ಚೊಚ್ಚಲ ಪಂದ್ಯದಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
176 ನಿಮಿಷಗಳ ಬ್ಯಾಟಿಂಗ್‌ನಲ್ಲಿ ರಾಹುಲ್ 115 ಎಸೆತಗಳನ್ನು ಎದುರಿಸಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ಶತಕ ತಲುಪಿದರು.ಭಾರತ ಈ ಪಂದ್ಯದಲ್ಲಿ 9 ವಿಕೆಟ್‌ಗಳ ಜಯ ಗಳಿಸಿತು. 
ಚೊಚ್ಚಲ ಏಕದಿನ ಪಂದ್ಯದಲ್ಲಿ ಗರಿಷ್ಠ ರನ್ ದಾಖಲಿಸಿದ ಭಾರತೀಯರು

ಆಟಗಾರ    ರನ್‌    ಎಸೆತ     ಎದುರಾಳಿ     ತಂಡಸ್ಥಳ     ದಿನಾಂಕ
ರಾಹುಲ್    100*    115    ಝಿಂಬಾಬ್ವೆ    ಹರಾರೆ        ಜೂ.11,2016
ಉತ್ತಪ್ಪ    086    096    ಇಂಗ್ಲೆಂಡ್‌       ಇಂದೋರ್‌       ಎ.15, 2006
ಬಿ. ಪಟೇಲ್  082    078    ಇಂಗ್ಲೆಂಡ್‌    ಲೀಡ್ಸ್‌        ಜೂ.13,1974
ಸಿದ್ದು       073    079    ಆಸ್ಟ್ರೇಲಿಯ      ಚೆನ್ನೈ          ಅ.09, 1987
ಎಂ.ಪಾಂಡ್ಯ  071    086    ಝಿಂಬಾಬ್ವೆ     ಹರಾರೆ     ಜು.14,2015

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News