×
Ad

ಕೆನಡಾ ಗ್ರಾನ್ ಪ್ರಿ ಟ್ರೋಫಿ ಅಲಿಗೆ ಅರ್ಪಿಸಿದ ಹ್ಯಾಮಿಲ್ಟನ್

Update: 2016-06-13 23:38 IST

ಮಾಂಟ್ರಿಯಲ್, ಜೂ.13: ಕೆನಡಾ ಗ್ರಾನ್ ಪ್ರಿ ಟ್ರೋಫಿ ಜಯಿಸಿದ ಲೂವಿಸ್ ಹ್ಯಾಮಿಲ್ಟನ್ ಈ ವರ್ಷದಲ್ಲಿ ಸತತ ಎರಡನೆ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಕೆನಡಾದಲ್ಲಿ ಐದನೆ ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಕಳೆದ ತಿಂಗಳು ಮೊನಾಕೊದಲ್ಲಿ ಪ್ರಶಸ್ತಿಯನ್ನು ಜಯಿಸುವ ಮೂಲಕ 7 ತಿಂಗಳ ಸೋಲಿಗೆ ಅಂತ್ಯ ಹಾಡಿದ್ದ 31ರ ಹರೆಯದ ಬ್ರಿಟನ್ ಆಟಗಾರ ಹ್ಯಾಮಿಲ್ಟನ್ ಕೆನಡಾ ಗ್ರಾನ್ ಪ್ರಿ ಗೆಲುವನ್ನು ಇತ್ತೀಚೆಗೆ ನಿಧನರಾದ ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿಗೆ ಸಮರ್ಪಿಸಿದರು.

ರವಿವಾರ ನಡೆದ ಎಫ್-1 ರೇಸ್‌ನಲ್ಲಿ ಕಳಪೆ ಆರಂಭದಿಂದ ಚೇತರಿಸಿಕೊಂಡ ಮರ್ಸಿಡೆಸ್ ತಂಡದ ಚಾಲಕ ಹ್ಯಾಮಿಲ್ಟನ್ ಫೆರಾರಿ ತಂಡ ಸೆಬಾಸ್ಟಿಯನ್ ವೆಟೆಲ್‌ರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News