2018 ರ ಫುಟ್ಬಾಲ್ ವಿಶ್ವಕಪ್ ಗೆ ಬ್ರೆಝಿಲ್ ಇಲ್ಲ ?

Update: 2016-06-14 13:51 GMT

ರಿಯೊ ಡಿ ಜನೈರೊ , ಜೂ. 14 :ಫುಟ್ಬಾಲ್ ಅಂದರೆ ಬ್ರೆಝಿಲ್ , ಬ್ರೆಝಿಲ್ ಎಂದರೆ ಫುಟ್ಬಾಲ್ ಎಂಬಂತಹ ಕಾಲವೊಂದಿತ್ತು. ಬ್ರೆಝಿಲ್ ಅನ್ನು ಬಿಟ್ಟು ಫುಟ್ಬಾಲ್ ಅನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂಬತಹ ವಾತಾವರಣ ಅದು. ಆಗ  ಫುಟ್ಬಾಲ್ ನ ಸೌನ್ದರ್ಯ, ನೈಪುಣ್ಯವನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸಬೇಕಾದರೆ ಬ್ರೆಝಿಲ್ ಆಟಗಾರರನ್ನು ನೋಡಬೇಕು. ಆದರೆ ಕಾಲ ಬದಲಾಗಿದೆ. ಜೊತೆಗೆ ಬ್ರೆಝಿಲ್ ಕೂಡ.  

ಐದು ಬಾರಿ ವಿಶ್ವಕಪ್  ಗೆದ್ದಿರುವ ಬ್ರೆಝಿಲ್ ತಂಡ ಇಂದು 2018 ರಲ್ಲಿ ರಶ್ಯಾದಲ್ಲಿ ನಡೆಯುವ ವಿಶ್ವಕಪ್ ಗೆ ಅರ್ಹತೆ ಗಳಿಸಲು ಪರದಾಡಬೇಕಾದ ಪರಿಸ್ಥಿತಿಯಲ್ಲಿದೆ. ಒಂದು ವೇಳೆ ಬ್ರೆಝಿಲ್ ಸ್ಥಾನ ಪಡೆಯಲು ವಿಫಲವಾದರೆ ಅದು ಫುಟ್ಬಾಲ್ ಅಭಿಮಾನಿಗಳ ಪಾಲಿಗೆ ಅತ್ಯಂತ ಬೇಸರದ ಕ್ಷಣ. 

ಈ  ಪರಿಸ್ಥಿತಿಗೆ ಕಾರಣವಾಗಿದ್ದು ಮೊನ್ನೆ ಕೊಪಾ ಅಮೇರಿಕ ಕೂಟದಲ್ಲಿ ಪೆರು ಎದುರು ವಿವಾದಾತ್ಮಕ ಗೋಲಿನ ಕಾರಣದಿಂದ ಸೋತು ಕೂಟದಿಂದ ಬ್ರೆಝಿಲ್ ಹೊರಬಿದ್ದಿದ್ದು. ಕೊಪಾ ಅಮೇರಿಕಾದಲ್ಲಿ ಪುಟ್ಟ ತಂಡ ಹೈಟಿಯನ್ನು ಭರ್ಜರಿಯಾಗಿ ಸೋಲಿಸಿದ ಬ್ರೆಝಿಲ್ , ಇಕ್ವೆಡಾರ್ ಎದುರು ಗೋಲು ಗಳಿಸದೆ ಡ್ರಾ ಮಾಡಿಕೊಂಡಿತು. 

ಇದೀಗ ಸ್ವದೇಶದಲ್ಲಿ ನಡೆಯುವ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲಬೇಕಾದ ಒತ್ತಡದಲ್ಲಿದೆ. ಏಕೆಂದರೆ ಈವರೆಗೆ ಬ್ರೆಝಿಲ್ ಒಲಿಂಪಿಕ್ಸ್ ಚಿನ್ನ ಗೆದ್ದಿಲ್ಲ. ಅದರ ಜೊತೆಜೊತೆಗೇ ವಿಶ್ವಕಪ್ ಗೆ ಸ್ಥಾನ ಗಿಟ್ಟಿಸಲು ಅದು ಹೋರಾಡಬೇಕಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News