×
Ad

ಭಾರತದ ಹೊಸ ಕೋಚ್ ಆಯ್ಕೆಗೆ ಸಮಿತಿ ರಚನೆ

Update: 2016-06-15 23:29 IST

ಹೊಸದಿಲ್ಲಿ, ಜೂ.15: ಟೀಮ್ ಇಂಡಿಯಾಕ್ಕೆ ಹೊಸ ಕೋಚ್ ಆಯ್ಕೆ ಮಾಡುವ ಸಂಬಂಧ ಭಾರತದ ಮಾಜಿ ತ್ರಿಮೂರ್ತಿಗಳಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ ಹಾಗೂ ವಿವಿಎಸ್ ಲಕ್ಷ್ಮಣ್ ಸಮಿತಿಯನ್ನು ರಚಿಸಲಿದ್ದಾರೆ. ಬಿಸಿಸಿಐ ಮಾಜಿ ಕಾರ್ಯದರ್ಶಿ ಹಾಗೂ ಕ್ರಿಕೆಟಿಗ ಸಂಜಯ್ ಜಗದಾಳೆ ಸಮಿತಿಯ ಮುಖ್ಯ ಸಂಯೋಜಕರಾಗಿರುತ್ತಾರೆ.

ಮುಖ್ಯ ಕೋಚ್ ಹುದ್ದೆಗೆ 57 ಅರ್ಜಿಗಳು ಸಲ್ಲಿಕೆಯಾಗಿದ್ದು, 21 ಅಭ್ಯರ್ಥಿಗಳು ಅಂತಿಮ ಪಟ್ಟಿಯಲ್ಲಿದ್ದಾರೆ. ಈ 21 ಅಭ್ಯರ್ಥಿಗಳು ಬಿಸಿಸಿಐ ವಿಧಿಸಿರುವ ಅರ್ಹತಾ ಮಾನದಂಡ ಹೊಂದಿದ್ದಾರೆ ಎಂದು ಬಿಸಿಸಿಐ ಬುಧವಾರ ಹೇಳಿದೆ. ತೆಂಡುಲ್ಕರ್, ಗಂಗುಲಿ ಹಾಗೂ ಲಕ್ಷ್ಮಣ್ ಜೂ.22 ರಂದು ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆಗೆ ವರದಿ ಸಲ್ಲಿಸಲಿದ್ದಾರೆ.

ಬಿಸಿಸಿಐ ಜೂ.24 ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪ್ರಮುಖ ಕೋಚ್ ಹೆಸರನ್ನು ಘೋಷಿಸುವ ಸಾಧ್ಯತೆಯಿದೆ. ಪ್ರಮುಖ ಕೋಚ್ ಹುದ್ದೆಗೆ ರವಿ ಶಾಸ್ತ್ರಿ, ಸಂದೀಪ್ ಪಾಟೀಲ್ ಹಾಗೂ ಅನಿಲ್ ಕುಂಬ್ಳೆ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News