×
Ad

ಝಿಂಬಾಬ್ವೆ ವಿರುದ್ಧ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತಕ್ಕೆ 2 ರನ್‌ಗಳ ಸೋಲು

Update: 2016-06-18 20:12 IST

 ಹರಾರೆ, ಜೂ.18: ಭಾರತ ವಿರುದ್ಧದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ಝಿಂಬಾಬ್ವೆ ತಂಡ 2 ರನ್ ಅಂತರದಿಂದ ರೋಚಕ ಜಯ ಸಾಧಿಸಿದೆ. ಕೊನೆಯ ಓವರ್‌ನಲ್ಲಿ ಅಮೋಘ ಬೌಲಿಂಗ್ ನಡೆಸಿದ ಝಿಂಬಾಬ್ವೆಯ ನೆವಿಲ್ಲೆ ಮಡ್ಝಿವಾ ಗೆಲುವಿನ ರೂವಾರಿಯಾಗಿ ಮೂಡಿ ಬಂದರು.

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತವನ್ನು ಮಣಿಸಿ ಶಾಕ್ ನೀಡಿದ ಝಿಂಬಾಬ್ವೆ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಝಿಂಬಾಬ್ವೆ ಅನುಭವಿ ಆಟಗಾರ ಎಲ್ಟನ್ ಚಿಗುಂಬುರ(ಔಟಾಗದೆ 54 ರನ್, 26 ಎಸೆತ, 1 ಬೌಂಡರಿ, 7 ಸಿಕ್ಸರ್) ಬಾರಿಸಿದ ಬಿರುಸಿನ ಅರ್ಧಶತಕದ ನೆರವಿನಿಂದ ಭಾರತದ ಗೆಲುವಿಗೆ 171 ರನ್ ಗುರಿ ನೀಡಿತು.

ಅಗ್ರ ಕ್ರಮಾಂಕದಲ್ಲಿ ಮನೀಷ್ ಪಾಂಡೆ(48) ಹಾಗೂ ಮನ್‌ದೀಪ್ ಸಿಂಗ್(31) ನೀಡಿದ ಕೊಡುಗೆಯ ನೆರವಿನಿಂದ ಭಾರತದ ಗೆಲುವಿನ ಸನಿಹ ತಲುಪಿತ್ತು. ಭಾರತಕ್ಕೆ ಕೊನೆಯ ಓವರ್‌ನಲ್ಲಿ ಗೆಲುವಿಗೆ 8 ರನ್ ಅಗತ್ಯವಿತ್ತು. ಆಗ ದಾಳಿಗೆ ಇಳಿದ ಬಲಗೈ ಮಧ್ಯಮ ವೇಗಿ ಮಡ್ಝಿವಾ ಕೊನೆಯ ಓವರ್‌ನ 2ನೆ ಎಸೆತದಲ್ಲಿ ಆಲ್‌ರೌಂಡರ್ ಅಕ್ಷರ್ ಪಟೇಲ್(18) ವಿಕೆಟ್ ಉಡಾಯಿಸಿ ಝಿಂಬಾಬ್ವೆ ಗೆಲುವನ್ನು ಖಚಿತಪಡಿಸಿದರು. ಮತ್ತೊಂದು ತುದಿಯಲ್ಲಿದ್ದ ನಾಯಕ ಧೋನಿಗೆ ಹೆಚ್ಚು ಸ್ಟ್ರೈಕ್ ಸಿಗದೇ ಇದ್ದ ಕಾರಣ ಭಾರತ ಕೇವಲ 2 ರನ್‌ನಿಂದ ಸೋಲುವಂತಾಯಿತು.

ಭಾರತ 90 ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು. ಆಗ ಧೋನಿ ಹಾಗೂ ಪಾಂಡೆ 5ನೆ ವಿಕೆಟ್‌ಗೆ 53 ರನ್ ಸೇರಿಸಿ ತಂಡವನ್ನು ಗೆಲುವಿನ ಹಳಿಗೆ ತಂದಿದ್ದರು. ಆದರೆ, ಅಂತಿಮ ಓವರ್‌ನಲ್ಲಿ ಅಕ್ಷರ್ ಪಟೇಲ್ ಔಟಾಗಿ ಭಾರತಕ್ಕೆ ದುಬಾರಿಯಾಗಿ ಪರಿಗಣಮಿಸಿತು.

ಝಿಂಬಾಬ್ವೆ ಪರ ಮುಝರಬನಿ(2-31) ಹಾಗೂ ಚಿಭಾಭಾ(2-13) ತಲಾ ಎರಡು ವಿಕೆಟ್ ಪಡೆದರು.

 ಝಿಂಬಾಬ್ವೆ 170/6: ಇದಕ್ಕೆ ಮೊದಲು ಚಿಗುಂಬುರಾ ಬಾರಿಸಿದ ಮಿಂಚಿನ ಅರ್ಧಶತಕದ ನೆರವಿನಿಂದ ಝಿಂಬಾಬ್ವೆ 20 ಓವರ್‌ಗಳಲ್ಲಿ ಸ್ಪರ್ಧಾತ್ಮಕ 170 ರನ್ ಗಳಿಸಿತು. ಮತ್ತೊಮ್ಮೆ ಮಧ್ಯಮ ಸರದಿ ಕುಸಿತಕ್ಕೆ ಒಳಗಾಗಿದ್ದ ಝಿಂಬಾಬ್ವೆ 16ನೆ ಓವರ್‌ನಲ್ಲಿ 115 ರನ್‌ಗೆ 5 ವಿಕೆಟ್ ಕಳೆದುಕೊಂಡಿತ್ತು.

ಆಗ 7ನೆ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಚಿಗುಂಬುರಾ 24 ಎಸೆತಗಳಲ್ಲಿ 7 ಸಿಕ್ಸರ್, 1 ಬೌಂಡರಿ ಸಿಡಿಸಿ ಝಿಂಬಾಬ್ವೆ ಅಂತಿಮ 4 ಓವರ್‌ಗಳಲ್ಲಿ 55 ರನ್ ಗಳಿಸಲು ನೆರವಾದರು.

ಝಿಂಬಾಬ್ವೆಗೆ ಹ್ಯಾಮಿಲ್ಟನ್ ಮಸಕಝ(25) ಹಾಗೂ ಚಿಭಾಭಾ(20) 3 ಓವರ್‌ಗಳಲ್ಲಿ 33 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಈ ಜೋಡಿಯನ್ನು ಬುಮ್ರಾ ಬೇರ್ಪಡಿಸಿದರು.

ಸಿಕಂದರ್ ರಝಾ(20) ಹಾಗೂ ವಾಲ್ಲರ್(30) ಅಮೂಲ್ಯ ಕಾಣಿಕೆ ನೀಡಿದರು.

ಸ್ಕೋರ್ ವಿವರ

ಝಿಂಬಾಬ್ವೆ: 20 ಓವರ್‌ಗಳಲ್ಲಿ 170/6

ಚಿಭಾಭಾ ಬಿ ಧವನ್ 20

ಮಸಕಝ ಸಿ ಧೋನಿ ಬಿ ಬುಮ್ರಾ 25

ಮುತುಂಬಮಿ ಗಾಯಾಳು ನಿವೃತ್ತಿ 00

ಸಿಕಂದರ್ ರಝಾ ರನೌಟ್ 20

ವಾಲ್ಲೆರ್ ಬಿ ಚಾಹಲ್ 30

ಮುತುಂಬೊಝಿ ಸಿ ಧವನ್ ಬಿ ಪಟೇಲ್ 03

ಚಿಗುಂಬುರ ಔಟಾಗದೆ 54

ಕ್ರಿಮರ್ ಸಿ ಧವನ್ ಬಿ ಬುಮ್ರಾ 04

ಮಡ್ಜಿವಾ ಔಟಾಗದೆ 05

ಇತರ 09

ವಿಕೆಟ್ ಪತನ: 1-33, 1-34, 2-50, 3-97, 4-98, 5-111, 6-130.

ಬೌಲಿಂಗ್ ವಿವರ:

ಉನದ್ಕಟ್ 4-0-43-0

ಧವನ್ 4-0-42-1

ಬುಮ್ರಾ 4-1-24-2

ಅಕ್ಷರ್ ಪಟೇಲ್ 4-1-18-1

ಯುರ್ವೆುಂದ್ರ ಚಾಹಲ್ 4-0-38-1

ಭಾರತ: 20 ಓವರ್‌ಗಳಲ್ಲಿ 168/6

ಕೆಎಲ್ ರಾಹುಲ್ ಬಿ ತಿರಿಪಾನೊ 00

ಮನ್‌ದೀಪ್ ಸಿಂಗ್ ಸಿ ಮುತುಂಬೊಝಿ ಬಿ ಚಿಭಾಭಾ 31

ಅಂಬಟಿ ರಾಯುಡು ಬಿ ಚಿಭಾಭಾ 19

ಮನೀಷ್ ಪಾಂಡೆ ಸಿ ತಿರಿಪಾನೊ ಬಿ ಮುಝರಬನಿ 48

ಕೇದಾರ್ ಜಾಧವ್ ಬಿ ಮುಝರಬನಿ 19

ಎಂಎಸ್ ಧೋನಿ ಔಟಾಗದೆ 19

ಅಕ್ಷರ್ ಪಟೇಲ್ ಸಿ ಸಬ್ ಬಿ ಮಡ್ಜಿವಾ 18

ರಿಷಿ ಧವನ್ ಔಟಾಗದೆ 01

ಇತರ 13

 ವಿಕೆಟ್ ಪತನ: 1-0, 2-44, 3-53, 4-90, 5-143, 6-164.

ಬೌಲಿಂಗ್ ವಿವರ: ತಿರಿಪಾನೊ 4-0-35-1

ಮಡ್ಜಿವಾ 4-0-34-1

ಮುಝರಬನಿ 4-0-31-2

ಚಿಭಾಭಾ 2-0-13-2

ಸಿಕಂದರ್ ರಝಾ 3-0-18-0

ಕ್ರಿಮರ್ 3-0-35-0

ಪಂದ್ಯಶ್ರೇಷ್ಠ: ಎಲ್ಟನ್ ಚಿಗುಂಬುರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News