ಸಂಶಯಾಸ್ಪದ ಶೈಲಿ; ಶಮಿಂದಾ ಎರಂಗಗೆ ನಿಷೇಧ
Update: 2016-06-19 23:59 IST
ಲಂಡನ್, ಜೂ.19: ಸಂಶಯಾಸ್ಪದ ಬೌಲಿಂಗ್ ಶೈಲಿಯ ಆರೋಪದಲ್ಲಿ ಶ್ರೀಲಂಕಾ ತಂಡದ ಬೌಲರ್ ಶಮಿಂದಾ ಈರಂಗ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿಷೇಧ ಹೇರಲಾಗಿದೆ.
ಡುರ್ರಹಾಂನಲ್ಲಿ ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದ ವೇಳೆ ಈರಂಗ ಬೌಲಿಂಗ್ ಶೈಲಿಯ ಬಗ್ಗೆ ಸಂಶಯ ಕಂಡು ಬಂದಿತ್ತು. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ 136 ರನ್‌ಗಳ ಜಯ ಗಳಿಸಿತ್ತು. ಇದರ ಬೆನ್ನಲ್ಲೆ ಎರಂಗ ಅವರಿಗೆ ನಿಷೇಧದ ಆದೇಶ ಹೊರಬಂದಿದೆ.