×
Ad

ಬೌನ್ಸರ್‌ ಬಡಿದು ಗಾಯಗೊಂಡಿದ್ದ ಬಾಂಗ್ಲಾ ಕ್ರಿಕೆಟರ್‌ ಸುಹ್ರುವಾಡಿ ಶುವೊ ಚೇತರಿಕೆ

Update: 2016-06-20 12:46 IST

ಢಾಕಾ, ಜೂ.20: ದೇಶಿಯ ಕ್ರಿಕೆಟ್ ನಲ್ಲಿ ಆಡುತ್ತಿದ್ದ ವೇಳೆ  ಚೆಂಡು ತಲೆಗೆ ಬಡಿದು ಗಾಯಗೊಂಡಿದ್ದ ಬಾಂಗ್ಲಾದೇಶದ  ಆಲ್‌ರೌಂಡರ್‌ ಸುಹ್ರುವಾಡಿ ಶುವೊ ಇದೀಗ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಢಾಕಾ ಪ್ರೀಮಿಯರ್‌ ಲೀಗ್‌ನಲ್ಲಿ ಶನಿವಾರ ವಿಕ್ಟೋರಿಯಾ  ಸ್ಪೋರ್ಟಿಂಗ್ ಕ್ಲಬ್‌ ತಂಡದ ಪರ ಶುವೊ ಆಡುತ್ತಿದ್ದಾಗ ಎದುರಾಳಿ ತಂಡ ಅಬಾನಿ  ಲಿಮಿಟೆಡ್‌ ತಂಡದ ಬೌಲರ್‌ ತಸ್ಕೀನ್‌ ಅಹ್ಮದ್‌ ಬೌನ್ಸರ‍್ ಎಸೆತಕ್ಕೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. 
ತಸ್ಕೀನ್‌ ಅಹ್ಮದ್‌ ಬೌನ್ಸರ‍್  ಶುವೊ ಅವರ ಬಲಭಾಗದ ಕುತ್ತಿಗೆಯ ಕೆಳಭಾಗಕ್ಕೆ ಚೆಂಡು ಅಪ್ಪಳಿಸಿದ್ದರಿಂದ ಅವರು ಕುಸಿದು ಬಿದ್ದರು. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ , ಬಳಿಕ ಢಾಕಾದ ಅಪೋಲೊ  ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶುವೊ ಚೇತರಿಸಿಕೊಂಡಿದ್ದಾರೆ. ಶುವೊ ಅವರ ಕುತ್ತಿಗೆಗೆ ಪೆಟ್ಟು ಬಿದ್ದಿದೆ.ಮೆದುಳಿಗೆ ಪೆಟ್ಟಾಗಿಲ್ಲ ಎಂದು  ಬಾಂಗ್ಲಾ ಕ್ರಿಕೆಟ್ ಮಂಡಳಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.
ಇನಿಂಗ್ಸ್‌ನ 25ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಶುವೊ 21 ರನ್‌ ಗಳಿಸಿ ಕ್ರೀಸ್‌ನಲ್ಲಿ ಬ್ಯಾಟಿಂಗ್‌ ನಡೆಸುತ್ತಿದ್ದಾಗ  ಅನಿರೀಕ್ಷಿತ ಬೌನ್ಸರ್‌ ನಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಚೆಂಡು  ಶುವೊ ಕುತ್ತಿಗೆಗೆ ಬಡಿದು ಕ್ರೀಸ್ ನಲ್ಲಿ ಕುಸಿದು ಬಿದ್ದಿದ್ದರು. ಹೆಲ್ಮೆಟ್‌ ಧರಿಸಿದ್ದರೂ, ಬೌನ್ಸರ್‌ ಹೊಡೆತದಿಂದ ಪಾರಾಗಲು  ಅವರಿಗೆ ಸಾಧ್ಯವಾಗಲಿಲ್ಲ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News