ಕುಂಬ್ಳೆ, ಶಾಸ್ತ್ರಿ, ಪಾಟೀಲ್‌ಗೆ ಮಂಗಳವಾರ ಸಂದರ್ಶನ
ಕೋಲ್ಕತಾ, ಜೂ.20: ಭಾರತೀಯ ಕ್ರಿಕೆಟ್ ತಂಡದ ಕೋಚ್ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಘಟಾನುಘಟಿಗಳಾದ ಅನಿಲ್ ಕುಂಬ್ಳೆ, ರವಿ ಶಾಸ್ತ್ರಿ ಹಾಗೂ ಸಂದೀಪ್ ಪಾಟೀಲ್ ಸಹಿತ ಇತರ ಆಕಾಂಕ್ಷಿಗಳು ನಗರದ ಹೊಟೇಲ್‌ನಲ್ಲಿ ಮಂಗಳವಾರ ಸಂದರ್ಶನ ಎದುರಿಸಲು ಸಜ್ಜಾಗಿದ್ದಾರೆ.
ಕೋಚ್ ಹುದ್ದೆಯ ಅಂತಿಮ ಪಟ್ಟಿಯಲ್ಲಿರುವ 21 ಅಭ್ಯರ್ಥಿಗಳನ್ನು ಸೌರವ್ ಗಂಗುಲಿ, ವಿವಿಎಸ್ ಲಕ್ಷ್ಮಣ್ ಹಾಗೂ ಸಚಿನ್ ತೆಂಡುಲ್ಕರ್ ಅವರನ್ನೊಳಗೊಂಡ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯು ಸಂದರ್ಶನ ನಡೆಸಲಿದೆ. ಲಂಡನ್‌ನಲ್ಲಿರುವ ಸಚಿನ್ ತೆಂಡುಲ್ಕರ್ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂದರ್ಶನ ನಡೆಸಲಿದ್ದಾರೆ. ಈ ಬೆಳವಣಿಗೆಯನ್ನು ಖಚಿತಪಡಿಸಿರುವ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು, ಎಲ್ಲ ಕೋಚ್ ಹುದ್ದೆಯ ಆಕಾಂಕ್ಷಿಗಳು ಸಂದರ್ಶನಕ್ಕೆ ಹಾಜರಾಗಲಿದ್ದಾರೆ ಎಂದಿದ್ದಾರೆ.
ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯ ಸಭೆಯು ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಸಭೆಯನ್ನು ಸಂಜಯ್ ಜಗದಾಳೆ ಸಂಯೋಜಿಸಲಿದ್ದಾರೆ. ಕೋಚ್ ಹುದ್ದೆಗೆ ಶಾಸ್ತ್ರಿ, ಕುಂಬ್ಳೆ ಹಾಗೂ ಪಾಟೀಲ್‌ರಲ್ಲದೆ ವಿಕ್ರಂ ರಾಥೋರ್, ಪ್ರವೀಣ್ ಆಮ್ರೆ, ಬಲ್ವಿಂದರ್ ಸಂಧು ಹಾಗೂ ವೆಂಕಟೇಶ್ ಪ್ರಸಾದ್ ಸಹಿತ ಹಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯು ಶಿಫಾರಸು ಮಾಡಲಿರುವ ಹೆಸರನ್ನು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್‌ಗೆ ಕಳುಹಿಸಿಕೊಡಲಾಗುತ್ತದೆ. ಅವರು ಜೂ.24 ರಂದು ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ ಅನುಮೋದಿಸಲಿದ್ದಾರೆ.
ಸ್ಪಿನ್ ದಿಗ್ಗಜ ಕುಂಬ್ಳೆ ಕೋಚ್ ಹುದ್ದೆಗೆ ಇರುವ ಎಲ್ಲ ಮಾನದಂಡ ಹೊಂದಿಲ್ಲ.