×
Ad

ವಿದೇಶದ ಟ್ರಯಲ್ಸ್‌ಗೆ ಐವರು ಬಾಲಕರು ಆಯ್ಕೆ

Update: 2016-06-21 23:48 IST

ಹೊಸದಿಲ್ಲಿ, ಜೂ.21: ಹದಿನೇಳು ವರ್ಷದೊಳಗಿನವರ ವಿಶ್ವಕಪ್‌ಗೆ ಆಟಗಾರರನ್ನು ಸಜ್ಜುಗೊಳಿಸುತ್ತಿರುವ ಎಐಎಫ್‌ಎಫ್ ವಿದೇಶದ ಟ್ರಯಲ್ಸ್‌ಗೆ ಐವರು ಬಾಲಕರನ್ನು ಆಯ್ಕೆ ಮಾಡಿದೆ.

ಎರಡು ದಿನಗಳ ಟ್ರಯಲ್ಸ್‌ನಲ್ಲಿ ಸುಮಾರು 250 ಬಾಲಕರು ಭಾಗವಹಿಸಿದ್ದರು. ಈ ಪೈಕಿ ಐವರು ಆಟಗಾರರಾದ ಅಗಸ್ಟಾಸ್ ನಿಕ್ಸನ್, ನೀಲಕಂಠ ಆನಂದ್, ಅರ್ಜುನ್ ಸುನೀಲ್, ರಿಕ್ಸನ್ ಲೊಬೊ ಹಾಗೂ ಯುವೀರ್ ಕೇಳ್ಕರ್ ಆಯ್ಕೆಯಾಗಿದ್ದಾರೆ.

ಟ್ರಯಲ್ಸ್‌ನಲ್ಲಿ ಆಯ್ಕೆಯಾದವರು ಜರ್ಮನಿಯಲ್ಲಿ ನಡೆಯಲಿರುವ ಶಿಬಿರದಲ್ಲಿ ಅಂಡರ್-17ರ ಕೋಚ್ ನಿಕೊಲೈ ಆಡಮ್‌ರಿಂದ ಮತ್ತಷ್ಟು ಟ್ರಯಲ್ಸ್‌ಗೆ ಒಳಗಾಗಲಿದ್ದಾರೆ.

ಅಂಡರ್-17 ವಿಶ್ವಕಪ್ ಭಾರತದ ಆತಿಥ್ಯದಲ್ಲಿ 2017ರ ಸೆಪ್ಟಂಬರ್-ಅಕ್ಟೋಬರ್‌ನಲ್ಲಿ ನಡೆಯಲಿದೆ.

ದುಬೈ ಟ್ರಯಲ್ಸ್‌ನಲ್ಲಿ ಭಾರತದ ಪ್ರತಿಭೆಗಳನ್ನು ನೋಡಿ ಅಚ್ಚರಿಯಾಯಿತು. 250 ಬಾಲಕರು ಎರಡು ದಿನಗಳ ಟ್ರಯಲ್ಸ್‌ನಲ್ಲಿ ಭಾಗವಹಿಸಿದ್ದರು ಎಂದು ಎಐಎಫ್‌ಎಫ್ ಸ್ಕೌಟಿಂಗ್ ಡೈರೆಕ್ಟರ್ ಅಭಿಷೇಕ್ ಯಾದವ್ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News