×
Ad

ಆಸ್ಪತ್ರೆಯಿಂದ ಬಿಡುಗಡೆಯಾದ ಶ್ರೀಲಂಕಾದ ವೇಗದ ಬೌಲರ್ ಎರಂಗ

Update: 2016-06-21 23:55 IST

ಡುಬ್ಲಿನ್, ಜೂ.21: ಹೃದಯದಲ್ಲಿ ಕಾಣಿಸಿಕೊಂಡ ಸಮಸ್ಯೆಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಲಂಕಾದ ವೇಗದ ಬೌಲರ್ ಶಮಿಂದಾ ಎರಂಗ ಯಾವುದೇ ಸಮಸ್ಯೆಯಿಲ್ಲದೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಟೀಮ್ ಮ್ಯಾನೇಜ್‌ಮೆಂಟ್ ಸೋಮವಾರ ಹೇಳಿದೆ.

ಶನಿವಾರ ಐರ್ಲೆಂಡ್ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಬ್ಯಾಟಿಂಗ್‌ನ ವೇಳೆ ಎದೆಬಡಿತ ಹೆಚ್ಚಾದಾಗ ಆತಂಕಗೊಂಡಿದ್ದರು. ಅವರು 24 ಗಂಟೆಗಳ ಕಾಲ ವೈದ್ಯರ ನಿಗಾದಲ್ಲಿದ್ದರು.

ಹೃದಯ ಸಮಸ್ಯೆಯಿಂದ ಎರಂಗ ಆಸ್ಪತ್ರೆಗೆ ದಾಖಲಾದ ಕೆಲವೇ ಸಮಯದಲ್ಲಿ ಐಸಿಸಿ ಎರಂಗರನ್ನು ಸಂಶಯಾಸ್ಪದ ಬೌಲಿಂಗ್ ಶೈಲಿಯ ಆರೋಪದಲ್ಲಿ ನಿಷೇಧ ಹೇರಿ ಶಾಕ್ ನೀಡಿತ್ತು.

ಎರಂಗ ಶ್ರೀಲಂಕಾದ ಪರ ಮತ್ತೊಮ್ಮೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡುವ ಮೊದಲು ಕೆಲವು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು.ದೇಶಿಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಬಹುದು ಎಂದು ಐಸಿಸಿ ಪ್ರಕಟನೆೆಯಲ್ಲಿ ತಿಳಿಸಿದೆ.

ಎರಂಗ ವೇಗದ ಬೌಲಿಂಗ್ ಕೋಚ್‌ರೊಂದಿಗೆ ತರಬೇತಿ ಪಡೆದು ತಂಡಕ್ಕೆ ವಾಪಸಾಗಲಿದ್ದಾರೆ ಎಂದು ಶ್ರೀಲಂಕಾದ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಹೇಳಿದ್ದಾರೆ.

2011ರಲ್ಲಿ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಎರಂಗ 19 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಉರುಳಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News