×
Ad

ಅಂತಿಮ ಟ್ವೆಂಟಿ-20: ಝಿಂಬಾಬ್ವೆ ಗೆಲುವಿಗೆ 139 ರನ್ ಗುರಿ

Update: 2016-06-22 18:43 IST

ಹರಾರೆ, ಜೂ. 22: ಇಲ್ಲಿ ಬುಧವಾರ ನಡೆದ ಮೂರನೆ ಹಾಗೂ ಅಂತಿಮ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಝಿಂಬಾಬ್ವೆ ತಂಡದ ಗೆಲುವಿಗೆ 139 ರನ್ ಗುರಿ ನೀಡಲಷ್ಟೇ ಶಕ್ತವಾಗಿದೆ.

ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಝಿಂಬಾಬ್ವೆ ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿತು. ಝಿಂಬಾಬ್ವೆಯ ಟಿರಿಪಾನೊ(3-20) ಬೌಲಿಂಗ್‌ಗೆ ತತ್ತರಿಸಿದ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 138 ರನ್ ಗಳಿಸಿತು.

ಕೇದಾರ್ ಜಾಧವ್(58 ರನ್, 42 ಎಸೆತ, 7 ಬೌಂಡರಿ, 1 ಸಿಕ್ಸರ್) ಅಗ್ರ ಸ್ಕೋರರ್ ಎನಿಸಿಕೊಂಡರು. ಕೆಎಲ್ ರಾಹುಲ್(22), ಅಂಬಟಿ ರಾಯುಡು(20) ಹಾಗೂ ಅಕ್ಷರ್ ಪಟೇಲ್(ಔಟಾಗದೆ 20) ಎರಡಂಕೆ ಸ್ಕೋರ್ ದಾಖಲಿಸಿದರು.

ಮನೀಷ್ ಪಾಂಡೆ ಶೂನ್ಯಕ್ಕೆ ರನೌಟಾದರು. ನಾಯಕ ಧೋನಿ ಕೇವಲ 9 ರನ್, ಆರಂಭಿಕ ದಾಂಡಿಗ ಮನ್‌ದೀಪ್ ಸಿಂಗ್ 4 ರನ್ ಗಳಿಸಲಷ್ಟೇ ಶಕ್ತರಾದರು.

ಮೂರು ಪಂದ್ಯಗಳ ಸರಣಿಯು 1-1 ರಿಂದ ಸಮಬಲಗೊಂಡಿದ್ದು, ಈ ಪಂದ್ಯವನ್ನು ಜಯಿಸುವ ತಂಡ ಸರಣಿಯನ್ನು ಗೆದ್ದುಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News