ಝಿಂಬಾಬ್ವೆ ವಿರುದ್ಧ ಭಾರತಕ್ಕೆ ಸರಣಿ ಜಯ
ಹರಾರೆ, ಜೂ.22: ಝಿಂಬಾಬ್ವೆ ವಿರುದ್ಧ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಭಾರತ 3 ರನ್‌ಗಳ ರೋಚಕ ಜಯ ಗಳಿಸಿದ್ದು, ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ಗೆಲುವಿಗೆ 139 ರನ್‌ಗಳ ಸವಾಲನ್ನು ಪಡೆದ ಝಿಂಬಾಬ್ವೆ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 135 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೊನೆಯ ಓವರ್‌ನಲ್ಲಿ ಝಿಂಬಾಬ್ವೆ ಗೆಲುವಿಗೆ 21 ರನ್ ಗಳಿಸಬೇಕಿತ್ತು. ಆದರೆ 17 ರನ್ ಮಾಡಿತು. ಬರೀಂದರ್ ಸ್ರಾನ್ ಝಿಂಬಾಬ್ವೆಯ ಬ್ಯಾಟಿಂಗ್‌ನ್ನು ನಿಯಂತ್ರಿಸಿದರು.
ಮರುಮಾ ಮತ್ತು ಚಿಗುಂಬುರಾ ಝಿಂಬಾಬ್ವೆಗೆ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ ಅವರ ಪ್ರಯತ್ನ ಫಲಿಸಲಿಲ್ಲ. ಕೊನೆಯ ಎಸೆತದಲ್ಲಿ 4 ರನ್ ಮಾಡಬೇಕಿತ್ತು. ಆದರೆ ಸ್ರಾನ್ ಅವರ ಫುಲ್‌ಟಾಸ್ ಎಸೆತವನ್ನು ಚಿಗುಂಬುರಾ ಸಮರ್ಥವಾಗಿ ಎದುರಿಸುವಲ್ಲಿ ಎಡವಿದರು. ಸ್ರಾನ್‌ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಝಿಂಬಾಬ್ವೆಯ ಗೆಲುವಿನ ಆಸೆ ಮಣ್ಣುಗೂಡಿತು.
ಚಿಗುಂಬುರಾ 16 ರನ್, ಮರುಮಾ ಔಟಾಗದೆ 23 ರನ್ ಸೇರಿಸಿದರು. ವಿ ಸಿಬಾಂದ 28 ರನ್ ಗಳಿಸಿರುವುದು ಝಿಂಬಾಬ್ವೆ ಪರ ದಾಖಲಾಗಿರುವ ಗರಿಷ್ಠ ಸ್ಕೋರ್ ಆಗಿದೆ. ಪಿ.ಜೆ. ಮೂರ್ 26 ರನ್, ಮಸಕಝ 15 ರನ್, ವಾಲೆರ್ 10 ರನ್ ಸೇರಿಸಿದರು.
ಇನಿಂಗ್ಸ್ ಆರಂಭಿಸಿದ ಝಿಂಬಾಬ್ವೆ 2.4 ಓವರ್‌ಗಳಲ್ಲಿ 17 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಪತನಗೊಂಡಿತು. ಚಿಭಾಭಾ 5 ರನ್ ಗಳಿಸಿ ಸ್ರಾನ್ ಎಸೆತದಲ್ಲಿ ಚಾಹಲ್‌ಗೆ ಕ್ಯಾಚ್ ನೀಡಿದರು. ಬಳಿಕ ಮಸಕಝರನ್ನು ಪಟೇಲ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
ಸ್ರಾನ್ 31ಕ್ಕೆ 2, ಕುಲಕರ್ಣಿ 23ಕ್ಕೆ 1, ಅಕ್ಷರ್ ಪಟೇಲ್ ಮತ್ತು ಚಾಹಲ್ ತಲಾ 1 ವಿಕೆಟ್ ಹಂಚಿಕೊಂಡರು.
138/6: ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 138 ರನ್ ಗಳಿಸಿತ್ತು. ತಂಡದ ಬ್ಯಾಟಿಂಗ್ ಕಳಪೆಯಾಗಿತ್ತು.
ಕೇದಾರ್ ಜಾಧವ್‌ರನ್ನು ಹೊರುಪಡಿಸಿ ಇತರ ಯಾರಿಂದಲೂ ಅರ್ಧಶತಕದ ಕೊಡುಗ ಎದೊರೆಯಲಿಲ್ಲ. ಜಾಧವ್ 58 ರನ್(70ನಿ, 42ಎ,7ಬೌ,1ಸಿ) ಗಳಿಸಿದರು. ಇವರನ್ನು ಹೊರತುಪಡಿಸಿದರೆ ಕೆ.ಎಲ್.ರಾಹುಲ್, ಅಂಬಟಿ ರಾಯುಡು ಮತ್ತು ಅಕ್ಷರ್ ಪಟೀಲ್ ಎರಡಂಕೆಯ ಕೊಡುಗೆ ನೀಡಿದರು.
ಕೆ.ಎಲ್ ರಾಹುಲ್ 22 ರನ್, ರಾಯುಡು 20 ರನ್ ಮತ್ತು ಅಕ್ಷರ್ ಪಟೇಲ್ ಔಟಾಗದೆ 20 ರನ್ ಗಳಿಸಿದರು.
ಮನ್‌ದೀಪ್ ಸಿಂಗ್(4), ಎಂಎಸ್ ಧೋನಿ(9) ವೈಫಲ್ಯದಿಂದಾಗಿ ತಂಡದ ಸ್ಕೋರ್ ಏರಲಿಲ್ಲ. 4.4ನೆ ಓವರ್‌ನಲ್ಲಿ ಮನೀಷ್ ಪಾಂಡೆ ಔಟಾಗುವುದರೊಂದಿಗೆ 27ಕ್ಕೆ 3 ವಿಕೆಟ್ ಕಳೆದುಕೊಂಡ ಭಾರತ ಬಳಿಕ ಚೇತರಿಸಿಕೊಂಡಿತು. ರಾಯುಡು ಮತ್ತು ಜಾಧವ್ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದರು.
ಸ್ಕೋರ್ ವಿವರ
ಭಾರತ: 20 ಓವರ್‌ಗಳಲ್ಲಿ 138/6
ರಾಹುಲ್ ಬಿ ಮಡ್ಝಿವಾ 22
ಮನ್‌ದೀಪ್ ಸಿಂಗ್ ಸಿ ಮರುಮಾ ಬಿ ತಿರಿಪಾನೊ 04
ರಾಯುಡು ಸಿ ಚಿಗುಂಬುರ ಬಿ ಕ್ರೀಮರ್ 20
ಮನೀಷ್ ಪಾಂಡೆ ರನೌಟ್ 00
ಜಾಧವ್ ಸಿ ಚಿಗುಂಬುರ ಬಿ ತಿರಿಪಾನೊ 58
ಎಂಎಸ್ ಧೋನಿ ಬಿ ತಿರಿಪಾನೊ 09
ಅಕ್ಷರ್ ಪಟೇಲ್ ಔಟಾಗದೆ 20
ಕುಲಕರ್ಣಿ ಔಟಾಗದೆ 01
ಇತರ 04
ವಿಕೆಟ್ ಪತನ: 1-20, 2-27, 3-27, 4-76, 5-93, 6-122
ಬೌಲಿಂಗ್ ವಿವರ:
ಚಟಾರ 4-1-34-0
ಟಿರಿಪಾನೊ 4-0-20-3
ಮಡ್ಝಿವಾ 4-0-32-1
ಚಿಭಾಭಾ 4-0-19-0
ಕ್ರಿಮರ್ 4-0-32-1
ಝಿಂಬಾಬ್ವೆ: 20 ಓವರ್‌ಗಳಲ್ಲಿ 135/6
ಚಿಭಾಭಾ ಸಿ ಚಾಹಲ್ ಬಿ ಸ್ರಾನ್ 05
ಮಸಕಝ ಎಲ್‌ಬಿಡಬ್ಲು ಪಟೇಲ್ 15
ಸಿಬಾಂಡ ಎಲ್‌ಬಿಡಬ್ಲು ಕುಲಕರ್ಣಿ 28
ಮೂರ್ ಸಿ ಮನ್‌ದೀಪ್ ಬಿ ಚಾಹಲ್ 26
ವಾಲ್ಲರ್ ಸಿ ಬುಮ್ರಾ ಬಿ ಕುಲಕರ್ಣಿ 10
ಚಿಗುಂಬುರ ಸಿ ಚಾಹಲ್ ಬಿ ಸ್ರಾನ್ 16
ಮರುಮಾ ಔಟಾಗದೆ 23
ಇತರ 12
ವಿಕೆಟ್ ಪತನ: 1-17, 2-57, 3-60, 4-86, 5-104, 6-135.
ಬೌಲಿಂಗ್ ವಿವರ:
ಸ್ರಾನ್ 4-1-32-2
ಧವಳ್ ಕುಲಕರ್ಣಿ 4-0-23-2
ಬುಮ್ರಾ 4-0-23-0
ಅಕ್ಷರ್ ಪಟೇಲ್ 4-0-18-1
ಯುಝ್ವೇಂದ್ರ ಚಾಹಲ್ 4-0-32-1.