ಒಲಿಂಪಿಕ್ಸ್: ಮೇರಿ ಕೋಮ್‌ಗೆ ಅವಕಾಶವಿಲ್ಲ

Update: 2016-06-22 18:04 GMT

ಮುಂಬೈ, ಜೂ.22: ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್ ರಿಯೋ ಗೇಮ್ಸ್‌ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

 ಎಐಬಿಎ ಹಂಗಾಮಿ ಸಮಿತಿಯ ಅಧ್ಯಕ್ಷ ಕಿಶನ್ ನಾರ್ಸಿ ಬುಧವಾರ ಈ ಬೆಳವಣಿಗೆಯನ್ನು ದೃಢಪಡಿಸಿದರು. ‘‘ಭಾರತ ಈ ಹಿಂದಿನ ಎರಡು ಆವೃತ್ತಿಯ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ 8 ಹಾಗೂ ಅದಕ್ಕಿಂತ ಹೆಚ್ಚು ಬಾಕ್ಸರ್‌ಗಳನ್ನು ಸ್ಪರ್ಧೆಗೆ ಕಳುಹಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಮೇರಿಕೋಮ್‌ಗೆ ಒಲಿಂಪಿಕ್ಸ್ ಟಿಕೆಟ್ ಲಭಿಸಿಲ್ಲ’’ ಎಂದು ಕಿಶನ್ ಹೇಳಿದ್ದಾರೆ.

‘‘ಕಳೆದ ಎರಡು ಆವೃತ್ತಿಯಲ್ಲಿ 8 ಕ್ಕಿಂತ ಹೆಚ್ಚು ಬಾಕ್ಸರ್‌ಗಳನ್ನು ಒಲಿಂಪಿಕ್ಸ್‌ಗೆ ಕಳುಹಿಸಿಕೊಡದೇ ಇರುವ ದೇಶಗಳಿಗೆ ವೈರ್ಲ್ಡ್ ಕಾರ್ಡ್ ನೀಡಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಎ) ನಿರ್ಧರಿಸಿದೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತದ 8 ಬಾಕ್ಸರ್‌ಗಳು ಭಾಗವಹಿಸಿದ್ದರು. ಏಳು ಪುರುಷರು ಹಾಗೂ ಓರ್ವ ಮಹಿಳೆ(ಮೇರಿಕೋಮ್) ಭಾಗವಹಿಸಿದ್ದರು’’ ಎಂದು ನಾರ್ಸಿ ಹೇಳಿದ್ದಾರೆ.

‘‘ಇದು ಐಒಸಿ ನಿಯಮ. ಅದನ್ನು ನಾವು ಗೌರವಿಸಬೇಕು. ಬೇಸರದ ವಿಷಯವೆಂದರೆ ನಮ್ಮೆಲ್ಲರ ಹೆಮ್ಮೆಯ ಬಾಕ್ಸರ್ ಮೇರಿಕೋಮ್‌ಗೆ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ನಮಗೆ ಅವರ ಮೇಲೆ ಗೌರವವಿದೆ’’ ಎಂದು ನಾರ್ಸಿ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News