×
Ad

ಸೆಪ್ಟಂಬರ‍್ ನಲ್ಲಿ ಮಿನಿ ಐಪಿಎಲ್‌

Update: 2016-06-24 16:07 IST

ಹೊಸದಿಲ್ಲಿ, ಜೂ.24: ಮುಂಬರುವ ಸೆಪ್ಟಂಬರ್‌ನಲ್ಲಿ ಮಿನಿ ಐಪಿಎಲ್‌ ಟ್ವೆಂಟಿ-20 ಟೂರ್ನಮೆಂಟ್‌ ನಡೆಯಲಿದ್ದು, ಐಪಿಎಲ್ ನ ಎಲ್ಲ ಎಂಟು ತಂಡಗಳು ಭಾಗವಹಿಸಲಿದೆ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.
ಎರಡು ವಾರಗಳ ಕಾಲ ನಡೆಯಲಿರುವ ಟೂರ್ನಮೆಂಟ್  ವಿದೇಶದಲ್ಲಿ ನಡೆಯಲಿದೆ. ಚಾಂಪಿಯನ್ಸ್‌ ಲೀಗ್‌ ಬದಲಿಗೆ ಮಿನಿ ಐಪಿಎಲ್ ಟೂರ್ನಮೆಂಟ್ ನಿಗದಿಯಾಗಿದೆ. ಆದರೆ ಟೂರ್ನಮೆಂಟ್ ನ ಸ್ವರೂಪ, ವೇಳಾಪಟ್ಟಿ ನಿಗದಿಯಾಗಿಲ್ಲ ಎಂದು ಠಾಕೂರ್‌ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News