×
Ad

ನೀವು ನಿವೃತ್ತಿಯಾಗುವುದು ಯಾವಾಗ ?

Update: 2016-06-27 23:39 IST

ಹೊಸದಿಲ್ಲಿ, ಜೂ.27: ಅರ್ಜೆಂಟೀನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಿಂದ ನಿವೃತ್ತಿಯಾದ ಬೆನ್ನಿಗೇ ಸಾಮಾಜಿಕ ಜಾಲ ತಾಣಗಳಲ್ಲಿ ಪಾಕಿಸ್ತಾನದ ಆಲ್‌ರೌಂಡರ್ ಶಾಹಿದ್ ಅಫ್ರಿದಿಯನ್ನು ಎಲ್ಲರೂ ಕಾಲೆಳೆಯತೊಡಗಿದ್ದಾರೆ.

ಅಫ್ರಿದಿಯವರೇ ನೀವು ನಿವೃತ್ತಿಯಾಗುವುದು ಯಾವಾಗ ಎಂದು ಟ್ವಿಟ್ಟರ್‌ನ ಮೂಲಕ ಕ್ರಿಕೆಟ್ ಅಭಿಮಾನಿಗಲು ಪ್ರಶ್ನಿಸಲಾರಂಭಿಸಿದ್ದಾರೆ.

ಪಾಕಿಸ್ತಾನ ತಂಡ ಪ್ರಮುಖ ವಿಶ್ವಮಟ್ಟದ ಟೂರ್ನಮೆಂಟ್‌ಗಳಲ್ಲಿ ಮುಗ್ಗರಿಸುತ್ತಿದ್ದರೂ ಅಫ್ರಿದಿ ನಿವೃತ್ತಿಯನ್ನು ಮುಂದೂಡುತ್ತಾ ಬಂದಿದ್ದಾರೆ. ಈ ವರ್ಷದ ಎಪ್ರಿಲ್-ಮೇನಲ್ಲಿ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ನಂತರ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಯೋಚನೆಯಲ್ಲಿದ್ದರು. ಆದರೆ, 36ರ ಹರೆಯದ ಅಫ್ರಿದಿ ವಿಶ್ವಕಪ್ ಕೊನೆಗೊಂಡ ಬಳಿಕ ನಿವೃತ್ತಿ ನಿರ್ಧಾರವನ್ನು ಮುಂದೂಡಿದ್ದರು.

 ಟೀಮ್ ಮ್ಯಾನೇಜ್‌ಮೆಂಟ್‌ನ ಒತ್ತಡದ ಬಳಿಕ ಪಾಕಿಸ್ತಾನದ ಟ್ವೆಂಟಿ-20 ನಾಯಕನ ಸ್ಥಾನ ತ್ಯಜಿಸಿದ್ದ ಅಫ್ರಿದಿ ಆಟಗಾರನಾಗಿ ಮುಂದುವರಿಯಲು ನಿರ್ಧರಿಸಿದ್ದರು. ಅಫ್ರಿದಿ ಈ ಮೊದಲೇ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು.

 ಮೆಸ್ಸಿಯ ನಿವೃತ್ತಿಯ ಬೆನ್ನಿಗೇ ಅಫ್ರಿದಿಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ‘ಇನ್ನು ನೀವು ಯಾವಾಗ ನಿವೃತ್ತಿಯಾಗುತ್ತೀರಿ’ ಎಂದು ಅಫ್ರಿದಿಗೆ ಪ್ರಶ್ನೆ ಕೇಳಲಾರಂಭಿಸಿದ್ದಾರೆ. ಅಫ್ರಿದಿಯನ್ನು ಗೇಲಿ ಮಾಡುವ ಟ್ವಿಟರ್‌ವೊಂದರಲ್ಲಿ ಮೆಸ್ಸಿಯವರಲ್ಲಿ ‘ನೀವು ಯಾವಾಗ ನಿವೃತ್ತಿ ಹಿಂಪಡೆಯುತ್ತೀರಿ?’ ಎಂದು ಕೇಳಲಾಗುತ್ತದೆ. ಅದಕ್ಕೆ ಮೆಸ್ಸಿ, ‘ನಿವೃತ್ತಿ ಹಿಂಪಡೆಯಲು ನಾನು ಅಫ್ರಿದಿಯೇ’ಎಂದು ಉತ್ತರ ನೀಡುತ್ತಾರೆ.

‘‘ಡಿಯರ್ ಮೆಸ್ಸಿ, ಇವರು ಶಾಹಿದ್‌ ಅಫ್ರಿದಿ , ಇವರು ಪ್ರತಿವರ್ಷ ನಿವೃತ್ತಿಯಾಗುತ್ತಾರೆ. ಪ್ರತಿ ಬಾರಿಯ ನಿವೃತ್ತಿಯ ಬಳಿಕ ಮತ್ತೆ ವಾಪಸಾಗುತ್ತಾರೆ. ಅಫ್ರಿದಿಯವರಂತೆಯೇ ನೀವು ಕೂಡ ಮತ್ತೆ ಫುಟ್ಬಾಲ್‌ಗೆ ವಾಪಸಾಗಿ ಎಂದು ಮತ್ತೊಂದು ಟ್ವೀಟ್‌ನಲ್ಲಿ ಫುಟ್ಬಾಲ್ ಅಭಿಮಾನಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News