ಭಾರತ-ನ್ಯೂಝಿಲೆಂಡ್ ಸರಣಿಯ ವೇಳಾಪಟ್ಟಿ ಪ್ರಕಟ
ಹೊಸದಿಲ್ಲಿ, ಜೂ.28: ಭಾರತ ಮತ್ತು ನ್ಯೂಝಿಲೆಂಡ್ ತಂಡಗಳ ನಡುವೆ ಮುಂಬರುವ ಸೆಪ್ಟಂಬರ್ 13ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ.
2016-17ರಲ್ಲಿ 13 ಟೆಸ್ಟ್, 8 ಏಕದಿನ ಮತ್ತು 3 ಟ್ವೆಂಟಿ-20 ಪಂದ್ಯ ನಿಗದಿಯಾಗಿದೆ. ನ್ಯೂಝಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಟೆಸ್ಟ್ ಪಂದ್ಯಗಳು ನಡೆಯಲಿದೆ. ಮೊದಲ ಟೆಸ್ಟ್ ನ್ಯೂಝಿಲೆಂಡ್ ವಿರುದ್ಧ ಸೆಪ್ಟೆಂಬರ್ 22ರಿಂದ 28ರ ತನಕ ನಿಗದಿಯಾಗಿದೆ.
ನ್ಯೂಝಿಲೆಂಡ್ 2012ರಲ್ಲಿ ಭಾರತಕ್ಕೆ ಭೇಟಿ ನೀಡಿತ್ತು. ನ್ಯೂಝಿಲೆಂಡ್ ಟೆಸ್ಟ್ ಸರಣಿಯನ್ನು 0-2 ಅಂತರದಿಂದ ಕಳೆದುಕೊಂಡಿತ್ತು. ಆದರೆ ಟ್ವೆಂಟಿ-20 ಸರಣಿಯನ್ನು 1-0 ಅಂತರದಲ್ಲಿ ಜಯಿಸಿತ್ತು.
ಕಾನ್ಪುರದ ಗ್ರೀನ್ ಪಾಕ್ð ಸ್ಟೇಡಿಯಂನಲ್ಲಿ ಐತಿಹಾಸಿಕ ಟೆಸ್ಟ್ ಪಂದ್ಯ ನಡೆಯಲಿದೆ.
ಭಾರತ -ನ್ಯೂಝಿಲೆಂಡ್ ವೇಳಾ ಪಟ್ಟಿ
ದಿನಾಂಕ ಪಂದ್ಯ ಸ್ಥಳ
ಸೆ.22-26 ಮೊದಲ ಟೆಸ್ಟ್ ಕಾನ್ಪುರ
ಸೆ.30ರಿಂದ ಅ.4 ಎರಡನೆ ಟೆಸ್ಟ್ ಇಂದೋರ್
ಅ.8ರಿಂದ ಅ.12 ಮೂರನೆ ಟೆಸ್ಟ್ ಕೋಲ್ಕತಾ
ಅ.16 ಮೊದಲ ಏಕದಿನ ಧರ್ಮಶಾಲಾ
ಅ.19 ಎರಡನೆ ಏಕದಿನ ಹೊಸದಿಲ್ಲಿ
ಅ.23 ಮೂರನೆ ಏಕದಿನ ಮೊಹಾಲಿ
ಅ.26 ನಾಲ್ಕನೆ ಏಕದಿನ ರಾಂಚಿ
ಅ.29 ಐದನೆ ಏಕದಿನ ವಿಶಾಖಪಟ್ಟಣ