×
Ad

ತರಬೇತಿಗೆ ವಿದೇಶಕ್ಕೆ ಹೋಗಲಾರೆ, ಸ್ವದೇಶವೇ ಸಾಕು

Update: 2016-06-28 23:52 IST

  ಹೊಸದಿಲ್ಲಿ, ಜೂ.28: ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಹೆಚ್ಚಿನ ಅಥ್ಲೀಟ್‌ಗಳು ಇದೀಗ ವಿದೇಶದಲ್ಲಿ ತರಬೇತಿ ನಿರತರಾಗಿದ್ದಾರೆ. ಆದರೆ, ಭಾರತದ ಏಕೈಕ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಸ್ವದೇಶದಲ್ಲೇ ತರಬೇತಿ ನಡೆಸಲು ನಿರ್ಧರಿಸಿದ್ದಾರೆ.

ಕರ್ಮಾಕರ್ ಕೋಚ್ ಬಿಸ್ವೇಶ್ವರ್ ನಂದಿ ಈ ವಿಷಯವನ್ನು ತಿಳಿಸಿದ್ದು, ಇದರಿಂದ ದೀಪಾಗೆ ಯಾವುದೇ ಸಮಸ್ಯೆ ಉಂಟಾಗದು ಎಂದು ಹೇಳಿದ್ದಾರೆ.

ಮಹಿಳೆಯರ ವೊಲ್ಟ್ಸ್ ಫೈನಲ್‌ನಲ್ಲಿ 14,833 ಅಂಕವನ್ನು ಗಳಿಸಿ ಚಿನ್ನದ ಪದಕವನ್ನು ಜಯಿಸಿದ್ದ ದೀಪಾ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತದ ಮೊದಲ ಜಿಮ್ನಾಸ್ಟಿಕ್ ತಾರೆ ಎಂಬ ಗೌರವದೊಂದಿಗೆ ಇತಿಹಾಸ ಬರೆದಿದ್ದರು.

ತ್ರಿಪುರಾದ ದೀಪಾ ಪ್ರಸ್ತುತ ಹೊಸದಿಲ್ಲಿಯ ಇಂದಿರಾ ಗಾಂಧಿ ಒಳಾಂಗಣ ಸ್ಟೇಡಿಯಂನಲ್ಲಿ ಅಭ್ಯಾಸ ನಿರತರಾಗಿದ್ದಾರೆ.

‘‘ನಾವು ತರಬೇತಿಗಾಗಿ ವಿದೇಶಕ್ಕೆ ಕಳುಹಿಸಿಕೊಡುವಂತೆ ಭಾರತದ ಕ್ರೀಡಾ ಪ್ರಾಧಿಕಾರಕ್ಕೆ ಮನವಿ ಮಾಡಿಲ್ಲ. ಕೆಲವು ಪ್ರಾಯೋಜಕರು ನಮ್ಮನ್ನು ಸಂಪರ್ಕಿಸಿದ್ದರು. ಎಲ್ಲರ ಪ್ರಸ್ತಾವವನ್ನು ತಿರಸ್ಕರಿಸಿದ್ದೆ’’ ಎಂದು ಕೋಚ್ ನಂದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News