ಹಾಕಿ ಟೂರ್ನಿ: ಭಾರತಕ್ಕೆ ಜಯ
Update: 2016-06-28 23:58 IST
ವಲೇನ್ಸಿಯಾ, ಜೂ.28: ಆರು ರಾಷ್ಟ್ರಗಳ ಆಹ್ವಾನಿತ ಪುರುಷರ ಹಾಕಿ ಟೂರ್ನಮೆಂಟ್‌ನಲ್ಲಿ ಭಾರತ ತಂಡ ದುರ್ಬಲ ಐರ್ಲೆಂಡ್ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿದೆ.
ಮಂಗಳವಾರ ನಡೆದ ಎರಡನೆ ಪಂದ್ಯದಲ್ಲಿ ಭಾರತದ ಪರ ಫಾರ್ವರ್ಡ್ ತಲ್ವಿಂದರ್ ಸಿಂಗ್ ಹಾಗೂ ನಾಯಕ ಸರ್ದಾರ್ ಸಿಂಗ್ ಕ್ರಮವಾಗಿ 22ನೆ ಹಾಗೂ 32ನೆ ನಿಮಿಷದಲ್ಲಿ ತಲಾ ಒಂದು ಗೋಲು ಬಾರಿಸಿದರು. ಐರ್ಲೆಂಡ್‌ನ ಪರ ಕೈಲ್ ಗುಡ್ ಏಕೈಕ ಸಮಾಧಾನಕರ ಗೋಲು ಬಾರಿಸಿದ್ದರು.
ಭಾರತ ಸೋಮವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಒಲಿಂಪಿಕ್ ಚಾಂಪಿಯನ್ ಜರ್ಮನಿಗೆ 0-4 ಅಂತರದಿಂದ ಶರಣಾಗಿತ್ತು.