ವಿಂಬಲ್ಡನ್ ಟೂರ್ನಿ: ವಾವ್ರಿಂಕಗೆ ಡೆಲ್ ಪೊಟ್ರೊ ಶಾಕ್
Update: 2016-07-01 23:47 IST
ವಿಂಬಲ್ಡನ್, ಜು.1: ವಿಂಬಲ್ಡನ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ಜುಯಾನ್ ಡೆಲ್ ಪೊಟ್ರೊ ನಾಲ್ಕನೆ ಶ್ರೇಯಾಂಕದ ಆಟಗಾರ ಸ್ಟಾನ್ ವಾವ್ರಿಂಕರನ್ನು ಮಣಿಸಿದರು.
ಶುಕ್ರವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಡೆಲ್ ಪೊಟ್ರೊ ಸ್ವಿಸ್‌ನ ವಾವ್ರಿಂಕರನ್ನು 3-6, 6-3, 7-6(2), 6-3 ಸೆಟ್‌ಗಳ ಅಂತರದಿಂದ ಮಣಿಸಿದರು.
2013ರಲ್ಲಿ ವಿಂಬಲ್ಡನ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ ಬಳಿಕ ಇದೇ ಮೊದಲ ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಭಾಗವಹಿಸಿದ ಅರ್ಜೆಂಟೀನದ ಡೆಲ್‌ಪೊಟ್ರೊ ಎರಡು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ವಾವ್ರಿಂಕಗೆ ಸೋಲುಣಿಸಿ ಶಾಕ್ ನೀಡಿದರು. ವಾವ್ರಿಂಕ ಮೂರು ವರ್ಷಗಳ ಹಿಂದೆ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಸೋತಿದ್ದರು.