ಹಾಶಿಮ್ ಆಮ್ಲ-ಡ್ವೇಯ್ನ ಬ್ರಾವೊ ಟ್ವೆಂಟಿ-20ಯಲ್ಲಿ ವಿಶ್ವ ದಾಖಲೆ!

Update: 2016-07-02 12:29 GMT

ಪೋರ್ಟ್ ಆಫ್ ಸ್ಪೇನ್, ಜು.2: ದಕ್ಷಿಣ ಆಫ್ರಿಕದ ಹಾಶಿಮ್ ಅಮ್ಲ ಹಾಗೂ ವೆಸ್ಟ್‌ಇಂಡೀಸ್‌ನ ಡ್ವೇಯ್ನ್ ಬ್ರಾವೊ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದು ಆಶ್ಚರ್ಯವೆನಿಸಿದರೂ ನಿಜ. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಶುಕ್ರವಾರ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಟ್ವೆಂಟಿ-20 ಟೂರ್ನಿಯಲ್ಲಿ 5ನೆ ವಿಕೆಟ್‌ಗೆ 150 ರನ್ ಜೊತೆಯಾಟ ನಡೆಸಿ ಈ ದಾಖಲೆ ನಿರ್ಮಿಸಿದರು.

ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ ಕೆಪಿಎಲ್ ಲೀಗ್‌ನಲ್ಲಿ ಟ್ರಿನಿಡಾಡ್ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದ ಅಮ್ಲ ಹಾಗೂ ಬ್ರಾವೊ ಬಾರ್ಬಡಾಸ್ ಟ್ರಿಡೆಂಟ್ಸ್ ತಂಡದ ವಿರುದ್ಧ ಕೇವಲ 92 ಎಸೆತಗಳಲ್ಲಿ ಚುಟುಕು ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಜೊತೆಯಾಟ ನಡೆಸಿದರು.
42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಮ್ಲ 54 ಎಸೆತಗಳಲ್ಲಿ 81 ರನ್ ಗಳಿಸಿ ಔಟಾದರು. ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದ್ದ ಬ್ರಾವೊ ಔಟಾಗದೆ 66 ರನ್ ಗಳಿಸಿದ್ದರು.
ಅಮ್ಲ-ಬ್ರಾವೊ ಭರ್ಜರಿ ಜೊತೆಯಾಟದ ನೆರವಿನಿಂದ ಟ್ರಿನಿಡಾಡ್ ತಂಡ 20 ಓವರ್‌ಗಳಲ್ಲಿ 5ಕ್ಕೆ 170 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಬಾರ್ಬಡಾಸ್ ತಂಡ 8 ವಿಕೆಟ್‌ಗಳ ನಷ್ಟಕ್ಕೆ 159 ರನ್ ಗಳಿಸಿ 11 ರನ್ ಗಳ ಅಂತರದಿಂದ ಸೋಲುಂಡಿತ್ತು.
 ಈ ಹಿಂದೆ 2007ರಲ್ಲಿ ನಡೆದ ಐಪಿಎಲ್ ಕೂಟದಲ್ಲಿ ಯೋಗೇಶ್ ತಕವಲೆ ಹಾಗೂ ಸಾಯಿರಾಜ್ ಬಹುತುಲೆ ಐದನೆ ವಿಕೆಟ್‌ಗೆ 149 ರನ್ ಗಳಿಸಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಜೊತೆಯಾಟ ನಡೆಸಿದ್ದ ದಾಖಲೆ ನಿರ್ಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News