×
Ad

ಆಫ್ರಿಕ ಮಕ್ಕಳ ಫುಟ್ಬಾಲ್ ಪ್ರೀತಿಗೆ ಮೂಲಭೂತ ಸೌಲಭ್ಯ ಕೊರತೆ ಅಡ್ಡಿಯಾಗಿಲ್ಲ!

Update: 2016-07-05 19:54 IST

 ಜೋಹಾನ್ಸ್‌ಬರ್ಗ್, ಜು.5: ಸಾಮಾನ್ಯವಾಗಿ ವಿಶ್ವದೆಲ್ಲೆಡೆ ಕ್ರೀಡಾ ತರಬೇತಿ ಮೈದಾನಗಳಿರುತ್ತವೆ. ಅತ್ಯಂತ ಮುಖ್ಯವಾಗಿ ಅಭಿವೃದ್ದಿ ಹೊಂದಿದ ಹಾಗೂ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಫುಟ್ಬಾಲ್ ಆಟಗಾರರು ಮೂಲಭೂತ ಸೌಕರ್ಯಗಳ ಕೊರತೆ ತಮ್ಮ ಕ್ರೀಡಾ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ದೂರುತ್ತಿರುತ್ತಾರೆ.

  ಕ್ರೀಡೆಯ ಮೇಲೆ ವ್ಯಾಮೋಹವಿದ್ದರೆ ಮೂಲಭೂತ ಸೌಕರ್ಯವಿಲ್ಲದಿದ್ದರೂ ಅಭ್ಯಾಸ ನಡೆಸಬಹುದು ಎನ್ನುವುದಕ್ಕೆ ಆಫ್ರಿಕದ ಮಕ್ಕಳು ಸಾಕ್ಷಿಯಾಗಿದ್ದಾರೆ. ಆಫ್ರಿಕದ ಮಕ್ಕಳು ಗೋಲ್‌ಕೀಪಿಂಗ್ ಅಭ್ಯಾಸ ನಡೆಸುವ ರೀತಿಯನ್ನು ನೋಡಿದರೆ ನಿಮ್ಮ ಯೋಚನೆಯೇ ಬದಲಾಗುತ್ತದೆ.

ಆಫ್ರಿಕ ದೇಶದಲ್ಲಿ ಸರಿಯಾದ ಮೈದಾನವಿಲ್ಲ, ಸರಿಯಾದ ತರಬೇತಿ ಸಲಕರಣೆಯೂ ಇಲ್ಲ. ಆಫ್ರಿಕದ ಈ ಪುಟ್ಟ ಮಕ್ಕಳು ಫುಟ್ಬಾಲ್ ಅಭ್ಯಾಸ ನಡೆಸಲು ಆರಂಭಿಸಿದರೆ ಈ ಎಲ್ಲ ಕೊರತೆಗಳು ನೆನಪಿಗೆ ಬರುವುದೇ ಇಲ್ಲ. ಮನಸ್ಸಿನಲ್ಲಿ ಏನನ್ನೂ ಯೋಚಿಸದೇ ಫುಟ್ಬಾಲ್ ಮೇಲಿನ ಪ್ರೀತಿಯಲ್ಲೇ ಆಡುವ ಆಫ್ರಿಕದ ಪುಟಾಣಿಗಳು ಮಣ್ಣಿನ ಮೈದಾನದಲ್ಲಿ ಡೈವ್ ಮಾಡುತ್ತವೆ. ಗೋಲ್‌ಕೀಪಿಂಗ್ ಅಭ್ಯಾಸವನ್ನು ನಡೆಸುತ್ತವೆ. ಮಕ್ಕಳು ಗೋಲ್‌ಕೀಪಿಂಗ್ ಅಭ್ಯಾಸ ನಡೆಸುವ ವಿಡಿಯೋ ಅಂರ್ತಜಾಲದಲ್ಲಿ ವೈರಲ್‌ನಂತೆ ಹರಿದಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News