ಫೆಡರರ್‌ಗೆ ರಾವೊನಿಕ್ ಶಾಕ್
Update: 2016-07-08 21:58 IST
ಲಂಡನ್, ಜು.8: ಕೆನಡಾದ ಯುವ ಆಟಗಾರ ಮಿಲೊಸ್ ರಾವೊನಿಕ್ ಏಳು ಬಾರಿಯ ಚಾಂಪಿಯನ್, ಹಿರಿಯ ಆಟಗಾರ ರೋಜರ್ ಫೆಡರರ್‌ರನ್ನು ಮಣಿಸುವ ಮೂಲಕ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ತಲುಪಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ರಾವೊನಿಕ್ ಅವರು ಫೆಡರರ್‌ರನ್ನು 6-3, 6-7(3/7), 4-6, 7-5, 6-3 ಸೆಟ್‌ಗಳ ಅಂತರದಿಂದ ಮಣಿಸಿ ಶಾಕ್ ನೀಡಿದರು.
ಈ ವರ್ಷ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಎರಡನೆ ಬಾರಿ ಸೆಮಿಫೈನಲ್‌ಗೆ ತಲುಪಿದ್ದ ರಾವೊನಿಕ್ ಅಂತಿಮ ಕ್ಷಣದಲ್ಲಿ ತಿರುಗೇಟು ನೀಡಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್ ತಲುಪಿದ ಕೆನಡಾದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ರಾವೊನಿಕ್ ಪಾಲಿಗೆ ಇದು ಮೊದಲ ಗ್ರಾನ್‌ಸ್ಲಾಮ್ ಫೈನಲ್ ಆಗಿದೆ.
ರಾವೊನಿಕ್ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಎರಡನೆ ಸೆಮಿಫೈನಲ್‌ನಲ್ಲಿ ಜಯ ಸಾಧಿಸಲಿರುವ ಬ್ರಿಟನ್‌ನ ಆ್ಯಂಡಿ ಮರ್ರೆ ಅಥವಾ ಝೆಕ್‌ನ ಥಾಮಸ್ ಬೆರ್ಡಿಕ್‌ರನ್ನು ಎದುರಿಸಲಿದ್ದಾರೆ.