×
Ad

ನೇಮರ್ ವಿರುದ್ಧ ಪ್ರಕರಣ ಕೈಬಿಟ್ಟ ಸ್ಪೇನ್ ಹೈಕೋರ್ಟ್

Update: 2016-07-08 23:30 IST

ಮ್ಯಾಡ್ರಿಡ್, ಜು.8: ಬ್ರೆಝಿಲ್‌ನ ಫುಟ್ಬಾಲ್ ತಂಡದ ನಾಯಕ ಹಾಗೂ ಬಾರ್ಸಿಲೋನದ ಆಟಗಾರ ನೇಮರ್ ವಿರುದ್ಧ ದಾಖಲಾಗಿದ್ದ ವಂಚನೆ ಹಾಗೂ ಭ್ರಷ್ಟಾಚಾರ ಪ್ರಕರಣವನ್ನು ಕೈಬಿಡಲಾಗಿದೆ ಎಂದು ಶುಕ್ರವಾರ ಸ್ಪೇನ್‌ನ ಹೈಕೋರ್ಟ್ ಹೇಳಿದೆ.

  ನೇಮರ್ ಯಾವುದೇ ಅಪರಾಧವನ್ನು ಮಾಡಿಲ್ಲ ಎಂದು ಹೇಳಿರುವ ನ್ಯಾಯಾಲಯ ನೇಮರ್ ಅವರ ತಂದೆ ಹಾಗೂ ಏಜೆಂಟ್ ಡಸಿಲ್ವಾ ಸ್ಯಾಂಟೊಸ್, ಬಾರ್ಸಿಲೋನ ಮಾಜಿ ಅಧ್ಯಕ್ಷ ಸ್ಯಾಂಡ್ರೊ ರಾಸ್ಸೆಲ್ ಹಾಗೂ ಸ್ಯಾಂಟೊಸ್‌ನ ಮಾಜಿ ಅಧ್ಯಕ್ಷ ಒಡಿಲಿಯೊ ರೊಡ್ರಿಗಝ್ ವಿರುದ್ಧದ ಪ್ರಕರಣವನ್ನೂ ಕೈಬಿಟ್ಟಿದೆ.

ಮೂರು ವರ್ಷಗಳ ಹಿಂದೆ ನೇಮರ್ ಬ್ರೆಝಿಲ್ ಫುಟ್ಬಾಲ್ ಕ್ಲಬ್ ಸ್ಯಾಂಟೊಸ್‌ನಿಂದ ಬಾರ್ಸಿಲೋನ ಕ್ಲಬ್‌ಗೆ ವರ್ಗಾವಣೆಯಾದ ಬಳಿಕ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News