×
Ad

ಕರ್ತವ್ಯಲೋಪವೆಸಗಿ ಕುಂಬ್ಳೆ ಕ್ಷಮೆ ಕೋರಿದ ಬ್ರಿಟಿಷ್ ಏರ್‌ವೇಸ್

Update: 2016-07-09 22:05 IST

ಲಂಡನ್, ಜು.9: ಕಳೆದ ವರ್ಷ ಸಚಿನ್ ತೆಂಡುಲ್ಕರ್ ಅವರಿಗೆ ವಿಮಾನದ ಟಿಕೆಟ್ ಖಚಿತಪಡಿಸುವುದಕ್ಕೆ ಸಂಬಂಧಿಸಿ ಕರ್ತವ್ಯಲೋಪ ಎಸಗಿದ್ದ ಬ್ರಿಟಿಷ್ ಏರ್‌ವೇಸ್(ಬಿಎ) ಈ ಬಾರಿ ಭಾರತದ ನೂತನ ಕೋಚ್ ಅನಿಲ್ ಕುಂಬ್ಳೆಗೂ ನಿರಾಸೆಗೊಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬ್ರಿಟಿಷ್ ಏರ್‌ವೇಸ್ ಅನಿಲ್ ಕುಂಬ್ಳೆ ಅವರ ಲಗೇಜ್‌ನ್ನು ಸರಿಯಾದ ಸ್ಥಳಕ್ಕೆ ತಲುಪಿಸದೇ ಕರ್ತವ್ಯಲೋಪ ಎಸಗಿದೆ. ಕುಂಬ್ಳೆ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಮುಂಬೈನಿಂದ ಲಂಡನ್ ಮಾರ್ಗವಾಗಿ ಸೈಂಟ್ಸ್ ಕಿಟ್ಸ್‌ಗೆ ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ತೆರಳುವ ವೇಳೆ ಈ ಪ್ರಮಾದ ನಡೆದಿದೆ. ಸೈಂಟ್ಸ್ ಕಿಟ್ಸ್‌ಗೆ ತಲುಪಿದ ಕುಂಬ್ಳೆಗೆ ತನ್ನ ಲಗೇಜ್ ಗ್ಯಾಟ್ವಿಕ್ ಏರ್‌ಪೋರ್ಟ್‌ನಲ್ಲೇ ಬಾಕಿ ಇರುವುದನ್ನು ಕೇಳಿ ಅಚ್ಚರಿಪಟ್ಟರು.

ಬ್ರಿಟಿಷ್ ಏರ್‌ವೇಸ್ ಕುಂಬ್ಳೆ ಲಗೇಜ್ ತಲುಪಿಸುವಲ್ಲಿ ಆಗಿರುವ ಪ್ರಮಾದದ ಬಗ್ಗೆ ಟ್ವಿಟ್ಟರ್‌ನಲ್ಲಿ ಕ್ರಿಕೆಟ್ ಶೈಲಿಯಲ್ಲಿ ತಿಳಿಸುವ ಮೂಲಕ ಗಮನ ಸೆಳೆದಿದೆ.

ನಿಮ್ಮ ಲಗೇಜ್ ಸೈಂಟ್ ಕಿಟ್ಸ್ ತನಕ ‘ನಾಟೌಟ್’ ಆಗದೇ ಇರುವುದಕ್ಕೆ ನಾವು ಕ್ಷಮೆಯಾಚಿಸುವೆವು. ನಿಮ್ಮ ಲಗೇಜ್ ಗ್ಯಾಟ್ವಿಕ್ ವಿಮಾನ ಹಿಂದೆ ಔಟಾಗಿದೆ’’ ಎಂದು ಮೊದಲ ಟ್ವೀಟ್‌ನಲ್ಲಿ ತಿಳಿಸಿರುವ ಬ್ರಿಟಿಷ್ ಏರ್‌ವೇಸ್ ಮುಂದಿನ ಟ್ವೀಟ್‌ನಲ್ಲಿ, ನಮ್ಮ ಸೇವೆಯನ್ನು ಸರಿಪಡಿಸಲು ನಾವು ನಿಮಗೆ ‘‘ಬೌಲ್’’ ಮಾಡುವುದನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದೆ.

ಕಳೆದ ವರ್ಷ ತೆಂಡುಲ್ಕರ್ ತಮ್ಮ ಕುಟುಂಬ ಸದಸ್ಯರೊಂದಿಗೆ ಅಮೆರಿಕದಲ್ಲಿ ನಡೆದ ಕ್ರಿಕೆಟ್ ಆಲ್ ಸ್ಟಾರ್ಸ್‌ ಸಿರೀಸ್‌ನಲ್ಲಿ ಭಾಗವಹಿಸಲು ತೆರಳಿದ್ದಾಗ ಬ್ರಿಟನ್ ಏರ್‌ವೇಸ್ ಸೀಟುಗಳು ಲಭ್ಯವಿದ್ದರೂ ವೇಟ್‌ಲೀಸ್ಟ್‌ನಲ್ಲಿದ್ದ ತೆಂಡುಲ್ಕರ್‌ರ ಟಿಕೆಟ್‌ಗಳನ್ನು ಖಚಿತಪಡಿಸಲು ವಿಫಲವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News