ವಿಲಿಯಮ್ಸ್ ಸೋದರಿಯರಿಗೆ ಆರನೆ ಡಬಲ್ಸ್ ಕಿರೀಟ
Update: 2016-07-10 11:41 IST
ಲಂಡನ್, ಜು.10:ಅಮೆರಿಕದ ಸೆರೆನಾ ವಿಲಿಯಮ್ಸ್ ಮತ್ತು ವಿನುಸ್ ವಿಲಿಯಮ್ಸ್ ಇಲ್ಲಿ ನಡೆದ ವಿಂಬಲ್ಡನ್ ಟೆನಿಸ್ ಮಹಿಳೆಯರ ಡಬಲ್ಸ್ ಕಿರೀಟ ಧರಿಸುವುದರೊಂದಿಗೆ ಆರನೆ ಬಾರಿ ಡಬಲ್ಸ್ ಪ್ರಶಸ್ತಿ ಎತ್ತಿದ ಸಾಧನೆ ಮಾಡಿದ್ದಾರೆ.
ಸೆರೆನಾ ಮತ್ತು ವಿನುಸ್ ಅವರು ಮಹಿಳೆಯರ ಡಬಲ್ಸ್‌ನ ಫೈನಲ್‌ನಲ್ಲಿ ಹಂಗೇರಿಯ ಟಿಮಿಯಾ ಬಾಬೊಸ್ ಮತ್ತು ಕಝಕಿಸ್ತಾನದ ಯರೊಸ್ಲಾವಾ ಶವೆಡೊವಾ ವಿರುದ್ಧ 6-3 6-4 ಅಂತರದಿಂದ ಜಯ ಗಳಿಸಿ ಪ್ರಶಸ್ತಿ ಬಾಚಿಕೊಂಡರು.ಇದಕ್ಕೂ ಮೊದಲು ಸೆರನಾ ಅವರು ಮಹಿಳೆಯರ ಸಿಂಗಲ್ಸ್‌ನ ಫೈನಲ್‌ನಲ್ಲಿ ಜರ್ಮನಿಯ ಏಂಜೆಲಿಕ್ ಕೆರ್ಬೆರ‍್ ವಿರುದ್ಧ ಜಯ ಗಳಿಸುವ ಮೂಲಕ 22ನೆ ಗ್ರ‍್ಯಾನ್ ಸ್ಲಾಮ್ ಜಯಿಸಿದ ಸ್ಟೆಫಿಗ್ರಾಫ್ ಸಾಧನೆಯನ್ನು ಸರಿಗಟ್ಟಿದ್ದರು.