×
Ad

ಇರಾಕ್‌ಗೆ ಇನ್ನೂ 560 ಅಮೆರಿಕ ಸೈನಿಕರು: ಕಾರ್ಟರ್

Update: 2016-07-11 23:54 IST

ಬಗ್ದಾದ್, ಜು. 11: ಐಸಿಸ್ ವಿರುದ್ಧದ ಯುದ್ಧದಲ್ಲಿ ನೆರವು ನೀಡುವುದಕ್ಕಾಗಿ ಅಮೆರಿಕವು ಇರಾಕ್‌ಗೆ ಹೆಚ್ಚುವರಿ 560 ಸೇನಾ ಸಿಬ್ಬಂದಿಯನ್ನು ಕಳುಹಿಸಲಿದೆ ಎಂದು ಇರಾಕ್‌ಗೆ ಭೇಟಿ ನೀಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಶ್ಟನ್ ಕಾರ್ಟರ್ ಸೋಮವಾರ ಘೋಷಿಸಿದರು.

ಇದರೊಂದಿಗೆ ಇರಾಕ್‌ನಲ್ಲಿರುವ ಅಮೆರಿಕ ಪಡೆಗಳ ಅಧಿಕೃತ ಸಂಖ್ಯೆ 4,600ಕ್ಕಿಂತಲೂ ಹೆಚ್ಚಾಗಿದೆ. ಅವರಲ್ಲಿ ಹೆಚ್ಚಿನವರು ಸಲಹಾಕಾರನ ಅಥವಾ ತರಬೇತುದಾರನ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ.ಐಸಿಸ್ ವಿರುದ್ಧದ ಯುದ್ಧ ಮತ್ತು ಭಯೋತ್ಪಾದಕರಿಂದ ಮೊಸುಲ್ ನಗರವನ್ನು ಮರುವಶಪಡಿಸಿಕೊಳ್ಳುವ ವ್ಯೆಹದ ಬಗ್ಗೆ ಇರಾಕ್ ಅಧಿಕಾರಿಗಳೊಂದಿಗೆ ಇದಕ್ಕೂ ಮೊದಲು ಮಾತುಕತೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News