ತಾಡ್ ನಿಯೋಜನೆ ವಿರುದ್ಧ ಭೌತಿಕ ದಾಳಿ
Update: 2016-07-11 23:55 IST
ಸಿಯೋಲ್, ಜು. 11: ಉತ್ತರ ಕೊರಿಯದ ಬೆದರಿಕೆಯನ್ನು ಎದುರಿಸುವುದಕ್ಕಾಗಿ ಕೊರಿಯನ್ ಪರ್ಯಾಯ ದ್ವೀಪದಲ್ಲಿ ಸುಧಾರಿತ ‘ತಾಡ್’ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಲು ಅಮೆರಿಕ ಮತ್ತು ದಕ್ಷಿಣ ಕೊರಿಯ ನಿರ್ಧರಿಸಿರುವ ಹಿನ್ನೆಲೆಯಲ್ಲಿ, ಭೌತಿಕ ಪ್ರತಿಕ್ರಿಯೆ ನೀಡುವುದಾಗಿ ಉತ್ತರ ಕೊರಿಯದ ಸೇನೆ ಸೋಮವಾರ ಹೇಳಿದೆ.
ಉತ್ತರ ಕೊರಿಯದ ಹೆಚ್ಚುತ್ತಿರುವ ಪರಮಾಣು ಮತ್ತು ಕ್ಷಿಪಣಿ ಸಾಮರ್ಥ್ಯಗಳ ಹಿನ್ನೆಲೆಯಲ್ಲಿ, ರಕ್ಷಣೆಗಾಗಿ ‘ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯ ಡಿಫೆನ್ಸ್ (ತಾಡ್) ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಬಳಸಲಾಗುವುದು ಎಂದು ಅಮೆರಿಕ ಮತ್ತು ದಕ್ಷಿಣ ಕೊರಿಯಗಳು ಶುಕ್ರವಾರ ಹೇಳಿದ್ದವು.