×
Ad

ಇಕ್ವೆಡಾರ್‌ನಲ್ಲಿ ಪ್ರಬಲ ಅವಳಿ ಭೂಕಂಪಗಳು

Update: 2016-07-11 23:56 IST

ಕ್ವಿಟೊ (ಇಕ್ವೆಡಾರ್), ಜು. 11: ಇಕ್ವೆಡಾರ್‌ನ ವಾಯುವ್ಯ ಕರಾವಳಿ ಪ್ರದೇಶದಲ್ಲಿ ರವಿವಾರ ರಾತ್ರಿ ಎರಡು ಪ್ರಬಲ ಭೂಕಂಪಗಳು ಸಂಭವಿಸಿವೆ. ಇವುಗಳು ಎಪ್ರಿಲ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದ ಇತ್ತೀಚಿನ ಪಶ್ಚಾತ್ ಕಂಪನಗಳು ಎನ್ನಲಾಗಿದೆ.

ಪ್ರಸಕ್ತ ಭೂಕಂಪಗಳಿಂದಾಗಿ ಸಾವು-ನೋವು ಉಂಟಾದ ಬಗ್ಗೆ ಅಥವಾ ಆಸ್ತಿ-ಪಾಸ್ತಿಗೆ ನಷ್ಟವುಂಟಾದ ಬಗ್ಗೆ ತಕ್ಷಣಕ್ಕೆ ವರದಿಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಭೂಕಂಪವು ರಿಕ್ಟರ್ ಮಾಪಕದಲ್ಲಿ 5.9ರಷ್ಟಿತ್ತು ಹಾಗೂ ಅದು ಅದರ ಕೇಂದ್ರ ಬಿಂದು ಕರಾವಳಿ ನಗರ ಎಸ್ಮರಲ್ಡಾಸ್‌ನ ದಕ್ಷಿಣಕ್ಕೆ 41 ಕಿ.ಮೀ. ದೂರದಲ್ಲಿತ್ತು ಎಂದು ಅಮೆರಿಕ ಜಿಯಾಲಜಿಕಲ್ ಸರ್ವೆ ತಿಳಿಸಿದೆ.

ಹತ್ತು ನಿಮಿಷಗಳ ಬಳಿಕ ಎರಡನೆ ಭೂಕಂಪವು ಅದೇ ಪ್ರದೇಶದಲ್ಲಿ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4ರ ತೀವ್ರತೆಯನ್ನು ಹೊಂದಿತ್ತು. ಎರಡೂ ಭೂಕಂಪಗಳು ಭೂಮಿಯ ಮೇಲ್ಮೈಯಿಂದ 35 ಕಿಲೋಮೀಟರ್ ಆಳದಲ್ಲಿ ಸಂಭವಿಸಿವೆ.

ಎಪ್ರಿಲ್ 16ರಂದು 7.8ರ ತೀವ್ರತೆಯ ಭೀಕರ ಭೂಕಂಪ ಸಂಭವಿಸಿದ ಪೆಸಿಫಿಕ್ ಕರಾವಳಿಯ ಅದೇ ಸಾಮಾನ್ಯ ವಲಯದಲ್ಲಿ ಈ ಭೂಕಂಪಗಳೂ ಸಂಭವಿಸಿವೆ. ಆ ಭೂಕಂಪದಲ್ಲಿ 663 ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 29,000 ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News