×
Ad

ಬುಧವಾರ ಸಾನಿಯಾ ಆತ್ಮಚರಿತ್ರೆ ಬಿಡುಗಡೆ

Update: 2016-07-12 23:39 IST

ಹೈದರಾಬಾದ್, ಜು.12: ಬಾಲಿವುಡ್ ನಟ ಶಾರುಕ್ ಖಾನ್ ಬುಧವಾರ ಇಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಝಾ ಅವರ ‘ಏಸ್ ಎಗೈರ್ಸ್ಟ್ ಒಡ್ಸ್’ ಹೆಸರಿನ ಆತ್ಮಚರಿತ್ರೆ ಪುಸ್ತಕವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ.

ಜೀವನಗಾಥೆಯನ್ನು ಪುಸ್ತಕ ರೂಪದಲ್ಲಿ ಹೊರ ತರುವುದು ನನ್ನ ಮಗಳ ಯೋಚನೆಯಾಗಿತ್ತು. ಪುಸ್ತಕ ಪೂರ್ಣಗೊಳಿಸಲು ಐದು ವರ್ಷ ಬೇಕಾಗಿದೆ. ಇದು ಆಕೆಯ ಪುಸ್ತಕ. ಆಕೆಯ ಅನಿಸಿಕೆ ಇದರಲ್ಲಿದೆ. ಸಾನಿಯಾ ತನ್ನ ಜೀವನದಲ್ಲಿ ಎದುರಿಸಿದ್ದ ಎಲ್ಲ ವಿವಾದಗಳು... ಪ್ರತಿಯೊಂದು ಇದರಲ್ಲಿದೆ... ಆಕೆಯ ವೃತ್ತಿಜೀವನ,ವೈಯಕ್ತಿಕ ಜೀವನದ ಕುರಿತು ಪುಸ್ತಕದಲ್ಲಿ ಮಾಹಿತಿಯಿದೆ ಎಂದು ಸಾನಿಯಾರ ತಂದೆ ಇಮ್ರಾನ್ ಮಿರ್ಝಾ ಹೇಳಿದ್ದಾರೆ.

ಹಾರ್ಪರ್ ಕಾಲಿನ್ಸ್‌ರಿಂದ ಪ್ರಕಟಿಸಲ್ಪಡುತ್ತಿರುವ ಏಸ್ ಎಗೈಸ್ಟ್ ಓಡ್ಸ್ ಮುಂಬೈ ಸಹಿತ ಇತರ ನಗರಗಳಲ್ಲೂ ಬಿಡುಗಡೆಯಾಗಲಿದೆ. ಮುಂಬೈನಲ್ಲಿ ಸಲ್ಮಾನ್ ಖಾನ್ ಪುಸ್ತಕವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. 40 ಅಧ್ಯಾಯಗಳಿರುವ ಪುಸ್ತಕದಲ್ಲಿ ನಾಲ್ಕು ವರ್ಷದಿಂದ ಆರಂಭವಾಗಿ ಇಂದಿನ ತನಕದ ಜೀವನಕಥೆ ಅಡಗಿದೆ ಎಂದು ಇಮ್ರಾನ್ ಮಿರ್ಝಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News